ಎಸ್ ಬಿ ಸಿಧ್ನಾಳ ನಿವಾಸದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ...

ಬೆಳಗಾವಿ, :ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಿತು ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಜಗದೀಶ್ ಶೆಟ್ಟರ್,ಡಾ. ಪ್ರಭಾಕರ ಕೋರೆ,ಸೇರಿದಂತೆ ಸ್ಥಳೀಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

promotions

ಬಿಜೆಪಿ ಯುವ ಮುಖಂಡ ದಿಗ್ವಿಜಯ ಸಿಧ್ನಾಳ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಗೋಕಾಕ,ಯರಗಟ್ಟಿ,ಸವದತ್ತಿ,ರಾಮದುರ್ಗ,ಬೈಲಹೊಂಗಲ ಸೇರಿದಂತೆ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರನ್ನು ಸೇರಿಸಿ,ಮಹತ್ವದ ಸಭೆ ಆಯೋಜಿಸುವ ಮೂಲಕ ಹಿರಿಯರಿಂದ ಮಾರ್ಗದರ್ಶನ ಮಾಡಿಸಿದರು.

promotions

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಮಾತನಾಡಿ,ಶಾಂತ,ಸುಂದರ ಬೆಳಗಾವಿಗಾಗಿ ಬಿಜೆಪಿಗೆ ಮತಕೊಡಿ,ದಿ‌ ಸುರೇಶ್ ಅಂಗಡಿ ಅವರ ಸ್ವಭಾವ ಹೇಗಿತ್ತು ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಅತ್ಯಂತ ಸರಳ ಸ್ವಭಾವದ ಹಿನ್ನಲೆಯುಳ್ಳ ಮನೆತನಕ್ಕೆ ಬಿಜೆಪಿ ಟಿಕೆಟ್ ಕೊಟ್ಟಿದ್ದು,ಸುರೇಶ್ ಅಂಗಡಿ ಅವರು ಕಂಡ ಕನಸು ನನಸು ಮಾಡುವ ಶಕ್ತಿ ಮಂಗಲಾ ಅಂಗಡಿ ಅವರಲ್ಲಿದ್ದು ಎಲ್ಲ ಮುಖಂಡರು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.

ಡಾ.ಪ್ರಭಾಕರ ಕೋರೆ ಅವರು ಎಲ್ಲ ಮುಖಂಡರಿಗೆ ಮಾರ್ಗದರ್ಶನ ಮಾಡಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದಾದ ಬಳಿಕ ಬಿಜೆಪಿ ಯುವ ಮುಖಂಡ ದಿಗ್ವಿಜಯ ಸಿಧ್ನಾಳ ಮಾತನಾಡಿ,ನಾವೆಲ್ಲ ಬಿಜೆಪಿಯ ಯುವ ಕಾರ್ಯಕರ್ತರು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಗೆಲುವಿಗೆ ಹಗಲಿರಳು ಶ್ರಮಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದು ಹೇಳಿದರು

Read More Articles