ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಸುರೇಶ ಅಂಗಡಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು; ಶೆಟ್ಟರ್
- 26 Dec 2023 , 4:31 AM
- Belagavi
- 86
ಬೆಳಗಾವಿ: ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಕೋವಿಡ್ ಹಾವಳಿಯಲ್ಲಿ ನೊಂದ ಜನಸಾಮಾನ್ಯರಿಗೆ ನೆರವು ನೀಡಿ ಜನರ ಕಣ್ಣೀರು ಒರೆಸಿದ್ದ ಸುರೇಶ್ ಅಂಗಡಿಯವರನ್ನೆ ಕೊವಿಡ್ ಬಲಿಪಡೆದಿದ್ದು ದುರಾದೃಷಕರ ಎಂದು ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಷಾದ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗಣೇಶಪುರ, ಬಾಳೆಕುಂದ್ರಿ ಕೆಎಚ್, ಹಲಗಾ ಗ್ರಾಮಗಳಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಸಭೆಯಲ್ಲಿ ಮಾತನಾಡಿ, ಬೆಳಗಾವಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸುರೇಶ್ ಅಂಗಡಿ ಅವರ ಕೊಡುಗೆ ಅಪಾರವಾಗಿದ್ದು ಬಿಜೆಪಿಗೆ ಮತ ನೀಡಲು ವಿನಂತಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸುರೇಶ್ ಅಂಗಡಿಯವರು ಮಾಡಿದ ಅಭಿವೃದ್ಧಿಪರ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ.

ಆ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಮಂಗಲಾ ಸುರೇಶ್ ಅಂಗಡಿ ಅವರನ್ನು ಬೆಳಗಾವಿ ಲೊಕಸಭೆಯ ಉಪಚುನಾವಣೆಯಲ್ಲಿ ಆಯ್ಕೆ ಮಾಡಬೇಕೆಂದು ವಿನಂತಿಸಿದರು. ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಮಾತನಾಡಿ, ಬೆಳಗಾವಿಗೆ ಸುವರ್ಣ ಸೌಧ ಬೆಳಗಾವಿ ರೈಲ್ವೆ ಯೋಜನೆ ವಿಶ್ವವಿದ್ಯಾನಿಲಯಗಳಂತಹ ಹತ್ತು ಹಲವಾರು ಮಹತ್ತರ ಕಾರ್ಯಗಳನ್ನು ಬೆಳಗಾವಿಗೆ ತಂದಿದ್ದಾರೆ.
ಇಂತಹ ಅಭಿವೃದ್ಧಿಪರ ಕಾರ್ಯಗಳನ್ನು ನೋಡಿ ಬಿಜೆಪಿಗೆ ಮತ ನೀಡಬೇಕೆಂದರು. ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ್ ಜೊಲ್ಲೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜನಪರವಾದ ಸಾಕಷ್ಟು ಕಾರ್ಯಗಳು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿದ್ದು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಮಂಗಲಾ ಅಂಗಡಿಯವರನ್ನು ಹೆಚ್ಚಿನ ಅಂತರದಿಂದ ಗೆಲವು ನಿಶ್ಚಿತ ಎಂದರು.
ಮಾಜಿ ಸಂಸದ ಕೆಎಲ್ಈ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೊಹಿತೆ,ಶಿವಾಜಿ ಸುಂಟಕರ,ನಾಗರಾಜ ಪಾಟೀಲ, ಪದ್ಮಾ ಚೇತನ ಅಂಗಡಿ, ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಸ್ತವಾಡ, ಬಾಹುಬಲಿ ಬಿಡುಚಿ, ಲಕ್ಷ್ಮೀ ಮಾಸ್ತಮರ್ಡಿ ರಾಜು ಪಾಟೀಲ, ಚಾರುಕಿರ್ತೀ ಸೇಬಣ್ಣವರ ಪದಾದಿಕಾರಿಗಳು ಇದ್ದರು.










