ಶೆಟ್ಟರ್ ಗೆ ತಿರುಗೇಟು ಕೊಟ್ಟ ಸತೀಶ
- 17 Dec 2023 , 8:37 PM
- Belagavi
- 131
ಬೆಳಗಾವಿ : ಕಾಂಗ್ರೆಸ್ ಅಭ್ಯರ್ಥಿ ಮೂರು ಬಾರಿ ಶಾಸಕರಾಗಿದ್ದರು ವಿಧಾನಸಭೆಯಲ್ಲಿ ದನಿ ಎತ್ತುವ ಕೆಲಸ ಮಾಡಿಲ್ಲ. ಇನ್ನೂ ಲೋಕಸಭೆಯಲ್ಲಿ ಏನು ಮಾಡಲಿದ್ದಾರೆ ಎಂಬ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಸಾಂಬ್ರಾ ಗ್ರಾಮದಲ್ಲಿ ಮಾತನಾಡಿದ ಅವರು, ' ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳುತ್ತಿರುವ ಮಾತುಗಳಲ್ಲಿ ಸತ್ಯ ಇದೆ. ಆದರೆ ಮಾತನಾಡುವುದೇ ಸಾಧನೆಯಲ್ಲ. ಬಿಜೆಪಿ ಪಕ್ಷದವರು ಮಾತನಾಡೋದೆ ಸಾಧನೆ ಎನ್ನುತ್ತಾರೆ. ಅದು ನಿಜವೂ ಹೌದು, ಭಾಷಣ ಮಾಡುವುದರಲ್ಲಿ ಅವರು ನಿಸೀಮರು' ಎಂದು ಟಾಂಗ್ ನೀಡಿದ್ದಾರೆ.

'ವಿಧಾನಸಭೆಯಲ್ಲಿ ಶೆಟ್ಟರ್ ಮೂರು ಗಂಟೆಯವರೆಗೂ ಮಾತನಾಡುತ್ತಾರೆ. ಆದರೆ ಇಲ್ಲಿಯವರೆಗೂ ಸಾಮಾನ್ಯ ಜನರ ಸಮಸ್ಯೆ ಆಲಿಸುವುದು, ಸರ್ಕಾರಿ ಕಚೇರಿಗಳಲ್ಲಿ ಅವರನ್ನು ಕಂಡಿಲ್ಲ. ಅವರ ಹಾಗೇ ನಾವು ಮೂರು ಗಂಟೆ ಭಾಷಣ ಮಾಡದೇ, ಅವರಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ.
ಅದು ನಮಗೆ ತೃಪ್ತಿ ಇದೆ. ಮೂರು ಗಂಟೆ ಮಾತನಾಡಿ, ಮೂರು ಗ್ಲಾಸ್ ನೀರು ಕುಡಿಯುವುದು ನೋಡಿದ್ದೇನೆ ಎಂದರು. 'ಅರಬಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರದ ವಿಚಾರಕ್ಕೆ ಮಾತನಾಡಿ, ಅವರು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತಿದ್ಧೇವೆ. ಅಲ್ಲಿಯೂ ನಮ್ಮದೆಯಾದ ವೋಟ್ ಬ್ಯಾಂಕ್ ಇದೆ.
ಅದರಿಂದ ನಮಗೆ ಯಾವುದೇ ರೀತಿ ಉಪಚುನಾವಣೆಯಲ್ಲಿ ಪರಿಣಾಮ ಬಿರುವುದಿಲ್ಲ ಎಂಬರ್ಥದಲ್ಲಿ' ಹೇಳಿದರು. 'ಬಹಿರಂಗ ಪ್ರಚಾರಕ್ಕೆ ನಾಳೆ ಕೊನೆಯ ದಿನವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳೇ ನಮಗೆ ಉಪಚುನಾವಣೆಗೆ ಅಸ್ತ್ರವಾಗಿವೆ. ಕಾಂಗ್ರೆಸ್ ಗೆಲುವು ಸಾಧಿಸಲು ಒಳ್ಳೆ ವಾತಾವರಣ ಇದೆ. ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ' ಎಂದು ವಿಶ್ವಾಸ ವ್ಯಕ್ತ ಪಡಿಸಿದರು.










