ನಾಗನೂರು ಶ್ರೀಗಳ ಆಶೀರ್ವಾದ ಪಡೆದ ನಾಡದೊರೆ

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಗುರುವಾರ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರ ಆಶೀರ್ವಾದ ಪಡೆದಿದ್ದಾರೆ.

promotions

ಕೇಂದ್ರ ಮಂತ್ರಿಗಳಾದ ಪ್ರಲ್ಹಾದ ಜೋಷಿ ಸಚಿವ ಜಗದೀಶ ಶೆಟ್ಟರ ಅವರೊಟ್ಟಿಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿ ಡಾ| ಅಲ್ಲಮಪ್ರಭು ಸ್ವಾಮೀಜಿಗಳನ್ನು, ಕಡೋಲಿಯ ಶ್ರೀ ಗುರುಬಸವಲಿಂಗ ಸ್ವಾಮೀಜಿಗಳನ್ನು, ಕಿತ್ತೂರು ಕಲ್ಮಠದ ಶ್ರೀಗಳನ್ನು ಸತ್ಕರಿಸಿ, ಅವರಿಂದ ಆಶೀರ್ವಾದ ಪಡೆದಿದ್ದಾರೆ.

promotions

ಈ ಸಂದರ್ಭದಲ್ಲಿ ಕಮತೇನಟ್ಟಿ ಗುರು ದೇವರು, ಶೇಗುಣಸಿಯ ಮಹಾಂತ ದೇವರು, ಕಾರಂಜಿ ಮಠದ ಶಿವಯೋಗಿ ದೇವರು, ಶಾಸಕ ಅನಿಲ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಬಿಜೆಪಿ ಯುವ ಮುಖಂಡ ಮಹಾಂತೇಶ ವಕ್ಕುಂದ, ವಿಶ್ವ ಹಿಂದು ಪರಿಷತ್ತಿನ ಕೃಷ್ಣ ಭಟ್, ಶ್ರೀಕಾಂತ ಕದಂ, ವಿಜಯ ಜಾಧವ್, ಬಸವರಾಜ ಭಾಗೋಜಿ,ಆನಂದ ಕರಲಿಂಗಣ್ಣವರ, ಬಸವರಾಜ ಗಾಣಗಿ, ಸುನೀಲ ಗೌರಣ್ಣ, ಬಸವರಾಜ ಹಳಿಂಗಳಿ, ಗಂಗಾರಾಮ್ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles