ಬೆಳಗಾವಿ: ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಸ್ತಬ್ಧವಾಗಿದ್ದು ನಗರದಲ್ಲಿ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಜನರು ಯಾರು ಬರದಂತೆ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದ್ ಮಾಡಿದ್ದಾರೆ. ಅನಗತ್ಯವಾಗಿ ರಸ್ತೆಗೆ ಬರುತ್ತಿರುವ ಕಾರು ಮತ್ತು ಬೈಕ್ ಸವಾರರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದು. ನಗರದಲ್ಲಿ ಖಾಸಗಿ ಟ್ಯಾಕ್ಸಿ, ಆಟೋ ಮತ್ತು ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತ ಗೊಳಿಸಲಾಗಿದೆ. ಈ 36 ಗಂಟೆಗಳ ಲಾಕ್ ಡೌನ್ ಅವಧಿಯಲ್ಲಿ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧ ಅಂಗಡಿಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅನುಮತಿ ನೀಡಿದ್ದು, ಇದರ ಹೊರತು ಇತರೇ ಯಾವುದೇ ಚಟುವಟಕೆಗಳಿಗೆ ಅನುಮತಿ ಇಲ್ಲ ಹಾಗೂ ನಿಗದಿಯಾದ ಮದುವೆಗಳಿಗೆ ಕೇವಲ 25 ಜನ ಮಾತ್ರ ಭಾಗವಹಿಸಲು ಬೆಳಗಾವಿ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಒಂದು ವೇಳೆ ಯಾರಾದರೂ ಮನೆಯಿಂದ ಹೊರಗೆ ಬಂದ್ರೆ ಅವರ ವಿರುದ್ಧ ಕೇಸ್ ಬಿಳೋದು ಗ್ಯಾರಂಟಿಯಾಗಿದೆ.