ಆರ್‌ಸಿಯು ಪರೀಕ್ಷೆಗಳು ಮುಂದೂಡಿಕೆ
- 14 Jan 2024 , 10:39 PM
- Belagavi
- 115
ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ 1, 3 ಮತ್ತು 5 ಸೆಮಿಸ್ಟರ್ ನ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಮೂರನೇ ಸೆಮಿಸ್ಟರ್ ನ ಎಂಬಿಎ ಪರೀಕ್ಷೆಗಳು ಈಗಾಗಲೇ ಬೆಳಗಾವಿ ವಿಜಯಪುರ ಹಾಗೂ ಬಾಗಲಕೋಟೆ ಸಂಚಿತ ಮಹಾವಿದ್ಯಾಲಯಗಳಲ್ಲಿ ಪರೀಕ್ಷೆಗಳನ್ನು (ಸೋಮವಾರ) ಏ.19 ರಂದು ನಿಗದಿ ಮಾಡಲಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಮುಂದುವರೆದಿದ್ದು, ಬಸ್ಸುಗಳು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ.

ವೇಳಾಪಟ್ಟಿಯನ್ನು ಶೀಘ್ರದಲ್ಲಿ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಅಧ್ಯಕ್ಷರುಗಳಿಗೆ, ನಿರ್ದೇಶಕರಿಗೆ ಹಾಗೂ ಸಂಯೋಜಕರಿಗೆ ತಿಳಿಸಲಾಗುವುದು ಹಾಗೂ ವಿಶ್ವವಿದ್ಯಾಲಯದ ವೆಬ್ ಸ್ಶೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮೌಲ್ಯಮಾಪನ ಕುಲಸಚಿವರಾದ ಪ್ರೊಫೆಸರ್ ಎಸ್ ಎನ್ ಹುರ ಕಡ್ಲಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











