ಆಮ್ಲಜನಕ ಎಕ್ಸ್‌ಪ್ರೆಸ್ ರೈಲು ಓಡಿಸಲು ಮುಂದಾದ ಕೇಂದ್ರ ಸರ್ಕಾರ
- 14 Jan 2024 , 11:06 PM
- Delhi
- 130
ಹೊಸದಿಲ್ಲಿ: ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರಗಳು ಪರದಾಡುತ್ತಿವೆ. ಆಸ್ಪತ್ರೆ, ಬೆಡ್, ಐಸಿಯೂ, ವೈದ್ಯಕೀಯ ಸಲಕರಣೆಗಳ ಕೊರತೆಯಾಗದಂತೆ ನೋಡಿಕೊಳ್ಳವುದು ಸರ್ಕಾರಕ್ಕೆ ಸಂಕಟವಾಗಿ ಪರಿಣಮಿಸಿದೆ, ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು.

ಆಮ್ಲಜನಕ ಎಕ್ಸ್‌ಪ್ರೆಸ್ ರೈಲು ಓಡಿಸಲು ಮುಂದಾಗಿದೆ. ಈ ಬಗ್ಗೆ ರೈಲ್ವೇ ಸಚಿವ ಪೀಯೂಷ್ ಗೋಯಲ್ ರವಿವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳಿಗೆ ಕ್ಷಿಪ್ರ ವಾಗಿ ಆಮ್ಲಜನಕ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ದ್ರವರೂಪದ ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕದ ಸಿಲಿಂಡರ್‌ಗಳನ್ನು ಈ ವಿಶೇಷ ರೈಲುಗಳಲ್ಲಿ ಕಳುಹಿಸಲಾಗುತ್ತದೆ.

ಇಂದಿನಿಂದ ಕಲಂಬೋಲಿ ಮತ್ತು ಬೊಯಿಸಾರ್ ನಿಲ್ದಾಣಗಳಿಂದ ವಿಶಾಖಪಟ್ಟಣ, ಜಮ್ಶೆಡ್‌ಪುರ, ರೂರ್ಕೆಲಾ ಮತ್ತು ಬೊಕಾರೋಗಳಿಗೆ ಈ ವಿಶೇಷ ರೈಲುಗಳು ತೆರಳಲಿವೆ.










