ಪೊಲೀಸರು ಹೃದಯದಿಂದ ಕೆಲಸ ಮಾಡಿ: ಭಾಸ್ಕರ್ ರಾವ್
- 14 Jan 2024 , 9:43 PM
- Belagavi
- 109
ಬೆಳಗಾವಿ :ಪೊಲೀಸ್ ಸಿಬ್ಬಂದಿಗಳು ಲಾಠಿ ಇಲ್ಲದೆ ಹೃದಯದಿಂದ ಕೆಲಸ ಮಾಡಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರರಾವ್ ಹೇಳಿದರು. ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ವೀಕೆಂಡ್ ಲಾಕ್ ಡೌನ್ ಮಾಡಿರುವುದು ಜನರ ರಕ್ಷಣೆಗಾಗಿ ಆದ್ದರಿಂದ ಪೊಲೀಸರು ಹೊರಗೆ ಬರುವ ಜನರಿಗೆ ಸೌಜನ್ಯವಾಗಿ ವರ್ತಿಸಬೇಕು. ಲಾಠಿ ಇಲ್ಲದೆ ಹೃದಯದಿಂದ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದೇನೆ ಎಂದರು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ಜೀವನ ಮತ್ತು ಜೀವ ಎರಡು ನಡೆಯಬೇಕು. ಒಂದಿಷ್ಟು ಕಾರ್ಯಕ್ರಮ ನಡೆಯಬೇಕು.

ಆದರೆ ಕಳೆದ ಭಾರಿ ನಡೆದ ರೀತಿಯಲ್ಲಿ ಲಾಕ್ ಡೌನ ಮಾಡುವುದಕ್ಕೆ ಆಗೋಲ್ಲ ಎಂದು ಸ್ಪಷ್ಪಪಡಿಸಿದರು ಇದು ಯುದ್ಧದ ಸಮಯ ಬೆಂಗಳೂರಿನಿಂದ ಏನು ಸೂಚನೆ ಬರುತ್ತವೆ ಆ ಸೂಚನೆಗಳ ಅನುಷ್ಠಾನಕ್ಕೆ ತರಲಾಗುತ್ತೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದರು.
ಸಭೆ ಸಮಾರಂಭಗಳಲ್ಲಿ ಜನರು ಜಾಸ್ತಿ ವೇಳೆ ಸಮಯ ಹಾಳು ಮಾಡಬಾರದು. ನಾಗರಿಕರು ಸಹ ನಾವೇ ನಾಯಕರು ಎಂದು ತಿಳಿದು ತಮ್ಮಗೆ ಸಾಧ್ಯವಾದರೆ ಮಾಸ್ಕ್ ವಿತರಣೆ ಮಾಡಬೇಕು.ಸೋಮವಾರ ಮುಂಜಾನೆ 6 ರ ವರೆಗೆ ಲಾಕ್ ಡೌನ ಇರುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿಕೊಂಡರು.










