ವಾಹನಗಳ ತಪಾಸಣೆ ನಡೆಸಿದ ಇನ್ಸಪೆಕ್ಟರ್ ದಿಲಿಪಕುಮಾರ್
- 14 Jan 2024 , 10:17 PM
- Belagavi
- 135
ಬೆಳಗಾವಿ: ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ರಸ್ತೆಗೆ ಇಳಿಯುವ ಪ್ರತಿಯೊಂದು ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ನಗರದ ಎಪಿಎಂಸಿ ಠಾಣೆಯ ಇನ್ಸ್ಪೆಕ್ಟರ್ ದೀಲಿಪಕುಮಾರ್ ಸ್ವತಃ ಫೀಲ್ಡಿಗೆ ಇಳಿದು ತಮ್ಮ ಸಿಬ್ಬಂದಿಗಳ ಜೊತೆಗೆ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ನಗರದ ಅಜಂ ನಗರ ಸೇರಿದಂತೆ ವಿವಿಧೆಡೆ ಖುದ್ದಾಗಿ ಭೇಟಿ ನೀಡಿ ಅನುಮತಿ ನೀಡಲಾಗಿರುವ ವಾಹನ ಹೊರತುಪಡಿಸಿ ಬೇರೆ ಯಾವ ವಾಹನಗಳೂ ಓಡಾಟ ನಡೆಸುವಂತಿಲ್ಲ. ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿದರೆ ವಾಹನ ಸವಾರರು ರಸ್ತೆಗಿಳಿಯಬಾರದು ಎಂದು ಹೇಳಿದರೂ ಕುಂಟು ನೆಪ ಹೇಳಿ ಅನಗತ್ಯವಾಗಿ ವಾಹನ ಸಂಚಾರ ನಡೆಸುತ್ತಿದ್ದ ಸವಾರರಿಗೆ, ಮಾಸ್ಕ್ ಧರಿಸದವರಿಗೆ ಬಿಸಿ ಮುಟ್ಟಿಸುತ್ತಿದ್ದು ಇನ್ಸಪೆಕ್ಟರ್ ದಿಲಿಪಕುಮಾರ್ ಕಾರ್ಯಕ್ಕೆ ಜನರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.











