ನಾಳೆಯಿಂದ ಕೋವಿಡ್ ಲಸಿಕೆಗಾಗಿ ಆಸ್ಪತ್ರೆ ಬಳಿ ಬರಬೇಡಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ
- 30 Dec 2023 , 12:04 PM
- Bengaluru
- 102
ಬೆಂಗಳೂರು: ನಾಳೆಯಿಂದ 18 - 45 ವರ್ಷದವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬೇಡಿ, ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸುಧಾಕರ್ ಮೇ.1 ರಿಂದ ಆರಂಭವಾಗಬೇಕಿದ್ದ ಲಸಿಕೆ ವಿತರಣೆ ಬಗ್ಗೆ ಲಸಿಕೆ ಉತ್ಪಾದನಾ ಕಂಪನಿಯಿಂದ ರಾಜ್ಯಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ನಾಳೆ ಯಾರೋ ಲಸಿಕೆ ಪಡೆಯಲು ಆಸ್ಪತ್ರೆಗೆ ಹೋಗುವುದು ಬೇಡ, ನಮ್ಮಲ್ಲಿ ಲಸಿಕೆ ಪಡೆಯಲು ಇದೀಗ ಅರ್ಹತೆ ಪಡೆದವರು ಅಂದಾಜು 3 ರಿಂದ 3.5 ಕೋಟಿಯಷ್ಟು ಜನರಿದ್ದಾರೆ. ಈಗಾಗಲೇ 1 ಕೋಟಿ ಡೋಸ್ ಕೊವಿಶೀಲ್ಸ್ ಆರ್ಡರ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












