ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಬಸ್ಕಿ ಹೊಡೆದ್ರಾ ?
- 14 Jan 2024 , 11:47 PM
- Raichur
- 160
ರಾಯಚೂರು: ಕರ್ನಾಟಕ ಉಪಚುನವಣೆ ಹಿನ್ನಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ 16 ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೋಲಿನ ಹತಾಷೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪಗೌಡ ಪಾಟೀಲ್, ಮಸ್ಕಿಯಲ್ಲಿ ನಾನು ಸೋಲುವುದಿಲ್ಲ ಎಂದು ಭಾವಿಸಿದ್ದೆ. ಆದ್ರೆ ಜನ ಬದಲಾವಣೆ ಬಯಸಿ ಹೊಸಬರಿಗೆ ಮತ ಹಾಕಿದ್ದಾರೆ. ಸೋಲು ಗೆಲುವು ಏನೆ ಆಗಲಿ ಅದರ ಹೊಣೆ ನಾನೆ ಹೊರುತ್ತೇನೆ ಎಂದು ಹೇಳಿದ್ದಾರೆ.

ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದ್ದು , ಬಿಜೆಪಿ ಬೆಂಬಲಿತ ಭಾಗದಲ್ಲೇ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರಿಂದ ಪ್ರತಾಪಗೌಡ ಪಾಟೀಲ್ ಸೋಲುಪ್ಪಿಕೊಂಡು ಹೊರ ನಡೆದಿರುವ ಘಟನೆ ನಡೆದಿದೆ. ಕ್ಷೇತ್ರದ ಜನತೆಗೆ ಅಭಿವೃದ್ಧಿ ಬೇಕಾಗಿಲ್ಲ. ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಮತದಾರರು ಕೈ ಹಿಡಿದಿಲ್ಲ . ನಮ್ಮವರೇ ನಮ್ಮ ಕೈ ಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೆ ಸ್ಥಾನಮಾನ ನೀಡುವ ವಿಚಾರ ಪಕ್ಷ ನಿರ್ಧರಿಸಲಿದೆ ಎಂದರು.











