ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವದು ನಮ್ಮೆಲ್ಲರ ಕರ್ತವ್ಯ: ಸಂಪತ್ತರಾವ ಕುರಣು

ಗೋಕಾಕ: ತಾಲೂಕಿನ ಕೊಣ್ಣೂರ ಪುರಸಭೆ ಕಾರ್ಯಾಲಯ ಕೊಣ್ಣೂರ ,ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪೋಲಿಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ದಿನ ಮಾಸ್ಕ ಡೆ ಆಚರಿಸಲು‌ ಜಾಥಾ ಹಮ್ಮಿಕೊಂಡಿದ್ದರು.
ಈ ಸಮಯದಲ್ಲಿ ಸಮುದಾಯ ಸಂಘಟನಾ ಅಧಿಕಾರಿ ಸಂಪತ್ತರಾವ ಕುರಣು ಮಾತನಾಡಿ ಜಗತ್ತಿನಲ್ಲಿ ಕೊರಾನಾ ವೈರಸದಿಂದ ಜಗತ್ತಿನಲ್ಲಿ ಜನ ತತ್ತರಿಸಿ ಹೊಗಿದೆ,ಅದಕ್ಕೆ ಇನ್ನು ಔಷದಿ ಕಂಡು ಹಿಡಿಯದೆ ಕಾರಣ ಜನರಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಮುಂಜಾಗೃತೆ ಕಾಯ್ದುಕೊಳ್ಳಲು ಜೂನ 18 ನೆ ದಿನ ಸರಕಾರದ ಆದೇಶದಂತೆ ಮತ್ತು ಮುಖ್ಯಾಧಿಕಾರಿಗಳ ನಿರ್ದೇಶನದಂತೆ ಕೊಣ್ಣೂರಲ್ಲಿ ಮಾಸ್ಕ್ ಡೆ ದಿನಾಚರಣೆ ಆಚರಿಸಲಾಗಿದೆ.

ಇನ್ನು ಮುಂದೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಇರುವ ಮತ್ತು ಮಾಸ್ಕ ದರಿಸದೆ ಇರುವವವರಿಗೆ ಪುರಸಭೆಯ ವತಿಯಿಂದ ದಂಡ ವಿದಿಸಲಾಗುವುದೆಂದು ಜನರಿಗೆ ತಿಳುವಳಿಕೆ ನೀಡಿದರು.ಅದಲ್ಲದೆ ಸಾರ್ವಜನಿಕರ ಸಹಕಾರ ಇಲ್ಲದೆ ರಾಷ್ಟೀಯ ಕಾರ್ಯಕ್ರಮ ಯಶಸ್ವಿ ಅಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಯಂ ಜಾಗೃತಿಯಿಂದ ಇದನ್ನು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿನೋದ ಕರನಿಂಗ, ಪ್ರಕಾಶ ಕರನಿಂಗ, ಅಟಲ್ ಕಡಲಗಿ ಪುರಸಭೆಯ ಸಿಬ್ಬಂದಿಗಳು,ಆರೋಗ್ಯ ಇಲಾಖೆಯ ಅಧಿಕಾರಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಶಾ,ಅಂಗನವಾಡಿ,ಪೌರಕಾರ್ಮಿಕರು ಮತ್ತು ಪುರಸಭೆಯ ಸರ್ವ ಸಿಬ್ಬಂದಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

promotions

Read More Articles