ನಿರ್ದಿಷ್ಟ ಗುರಿ, ಅಚಲ ನಿರ್ಧಾರ ಮಂಗಲಾ ಅಂಗಡಿ ಗೆಲುವಿನ ಸೂತ್ರ

ಬೆಳಗಾವಿ :ಹೌದು... ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮೊಟ್ಟ ಮೊದಲ ಬಾರಿಗೆ ಮಹಿಳೆ ಒರ್ವಳು ದಿಲ್ಲಿಯ ಸಂಸತ್ತು ಪ್ರವೇಶಿಸಿದ್ದಾರೆ ಎಂದರೆ ಅವರು ಬೇರೆ ಯಾರು ಅಲ್ಲಾ ಅವರೇ ಮಂಗಲಾ ಅಂಗಡಿ. ಮಾಜಿ ಕೇಂದ್ರ ಸಚಿವ, ಸೋಲಿಲ್ಲದ ಸರದಾರ, ಸರಳ, ಸಜ್ಜನ, ಶರಣ ಜೀವಿ, ಅಜಾತಶತ್ರು ದಿವಂಗತ ಸುರೇಶ ಅಂಗಡಿ ಅವರ ಧರ್ಮ ಪತ್ನಿ ಮಂಗಲಾ ಅಂಗಡಿ ಈ ಕ್ಷೇತ್ರದ ಸಂಸದೆ ಆಗುವ ಮೂಲಕ ಮೊದಲ ಮಹಿಳಾ ಸಂಸದೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

promotions
logintomyvoice

ಕುಟುಂಬ, ಉದ್ಯಮ ಹಾಗೂ ರಾಜಕಾರಣ ಹೀಗೆ ಎಲ್ಲ ದಡಗಳ ಮೇಲೆ ಕಾಲಿಟ್ಟು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮಂಗಲಾ ಅಂಗಡಿ ಇಂದಿನ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. 

promotions
logintomyvoice

ಮಂಗಲಾ ಅಂಗಡಿ ಅವರದು ಏನು ರಾಜಕೀಯ ಹಿನ್ನೆಲೆಯ ಮನೆತನ ಅಲ್ಲ, ಆರಂಭದಲ್ಲಿ ರಾಜಕೀಯವಾಗಿ ಪಳಗಿದವರೂ ಅಲ್ಲ ಆದರೆ ದಿವಂಗತ ಸುರೇಶ ಅಂಗಡಿ ಅವರ ಸೋಲು, ಗೆಲುವುಗಳ ಜೊತೆ ಸದಾ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ನೋವು, ನಲಿವುಗಳಲ್ಲಿ ಭಾಗಿಯಾಗಿದ್ದರು.

logintomyvoice

ಬಿಜೆಪಿ ಪಕ್ಷ ಉಪಚುನಾವಣೆಯ ಟಿಕೆಟ್ ನೀಡಿ ಅವರನ್ನು ಪೂರ್ಣ ಪ್ರಮಾಣದಲ್ಲಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದೆ ತಡ ಕೆಲ ವಿರೋಧಿಗಳು ಕತ್ತಿ ಮಸೆಯಲು ಯತ್ನಿಸಿದರು ಮಂಗಲಾ ಅಂಗಡಿಯವರು ಮಾತ್ರ ತಮ್ಮಷ್ಟಕ್ಕೆ ತಾವು ಶ್ರದ್ದಾ ಪೂರ್ವಕವಾಗಿ ಪ್ರಚಾರ ಮಾಡಿದರು ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಸುತ್ತಿ ಸಾಧನೆಯ ಮೂಲಕ ತಕ್ಕ ಉತ್ತರ ನೀಡಿದ್ದಾರೆ.

logintomyvoice

ರಾಜಕಾರಣ ಪ್ರವೇಶ ಮಾಡಿದ ಮೇಲೆ ನಿರ್ದಿಷ್ಟ ಗುರಿ, ಅಚಲ ನಿರ್ಧಾರ, ನಿರಂತರ ಸಾಧನೆಯೊಂದಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಂಗಲಾ ಅಂಗಡಿ ತೋರಿಸಿಕೊಟ್ಟಿದ್ದಾರೆ.

Read More Articles