ತಿಪಟೂರಿನ ವೈದ್ಯ ದಂಪತಿಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ಸಲಾಂ

ಬೆಂಗಳೂರು: ಕೋವಿಡ್ ಅಪಾಯಕಾರಿಯಾಗಿ ವ್ಯಾಪಿಸುತ್ತಿದ್ದರೂ ತಿಪಟೂರಿನ ಡಾ. ಶ್ರೀಧರ್ ದಂಪತಿಗಳು ನಿರಂತರವಾಗಿ ಕೋವಿಡ್ ಪೀಡಿತರಿಗೆ ಪ್ರತಿನಿತ್ಯ ಉಚಿತ ಚಿಕಿತ್ಸೆ ಮತ್ತು ಊಟೋಪಚಾರಗಳನ್ನು ನೀಡುತ್ತಾ ಮಾದರಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಅಭಿನಂದನೀಯವಾಗಿದೆ.

promotions
logintomyvoice

ತಮಗೆ ಹಣ ಮುಖ್ಯವಲ್ಲ, ಜನರ ಜೀವ ಮುಖ್ಯ ಎಂಬ ಧ್ಯೇಯದೊಂದಿಗೆ ಈ ವೈದ್ಯ ದಂಪತಿಗಳು " ವೈದ್ಯೋ ನಾರಾಯಣೋ ಹರಿ" ಎಂಬ ಮಾತನ್ನು ಅಕ್ಷರಶ: ನಿಜಗೊಳಿಸಿ ಪ್ರಾಣದಾತರಾಗಿದ್ದಾರೆ.

promotions
logintomyvoice

ಈ ವೈದ್ಯರ ಅನುಪಮ ಸೇವೆಗೆ ನಮ್ಮೆಲ್ಲರ ಆತ್ಮೀಯ ಮೆಚ್ಚುಗೆಗಳು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More Articles