ಆಕ್ಸಿಜನ್ ಪೂರೈಕೆ ಕುರಿತು ನಿಗಾ ವಹಿಸಲು ಮೇಲುಸ್ತುವಾರಿ ಅಧಿಕಾರಿಗಳನೇಮಕ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್

 ಬೆಳಗಾವಿ :ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವಹಿನ್ನಲೆಯಲ್ಲಿ ಆಕ್ಸಿಜನ್ ಕೊರತೆ ಇರುವ ರೋಗಿಗಳಿಗೆ ಶೀಘ್ರವಾಗಿ ಆಕ್ಷಿಜನ್ ಪೂರೈಸಲುಜಿಲ್ಲಾಡಳಿತದ ವತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

promotions

ಆಕ್ಷಿಜನ್ ತಯಾರಕರು ಮತ್ತು ಸರಬರಾಜುದಾರರಿಗೆ  (ಏಜನ್ಸಿಸ್) ನಿಗದಿತ (ಕ್ಯಾಂಪ ಆಫೀಸರ್)ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನೇಮಕಗೊಂಡ ಅಧಿಕಾರಿಗಳು ಪ್ರತಿದಿನ ಏಜನ್ಸಿಸ್‌ಗೆ ಭೇಟಿ ನೀಡಿ, ಏಜನ್ಸಿಯಲ್ಲಿ ಒಟ್ಟು ಪೂರೈಕೆಯಾದ ಆಕ್ಷಿಜನ್ ವಿವರವನ್ನು ಪ್ರತಿ ದಿನ ಅಪರಜಿಲ್ಲಾಧಿಕಾರಿ ಹಾಗೂ  ಆಮ್ಲಜನಕ ನೋಡಲ್ ಅಧಿಕಾರಿಯಾಗಿರುವಯೋಗೇಶ್ವರ್ ಎಸ್. ಅವರಿಗೆ ಸಲ್ಲಿಸಬೇಕು.

promotions

ಏಜೆನ್ಸಿ/ ಸಂಸ್ಥೆಗಳಿಗೆಮೇಲುಸ್ತುವಾರಿಅಧಿಕಾರಿಗಳನೇಮಕ :

ಕಾಕತಿ ಪ್ರದೇಶದಲ್ಲಿರುವ ಬೆಳಗಾವಿ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ಗೆಮೇಲುಸ್ತುವಾರಿ ಅಧಿಕಾರಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಎ.ಜೆ.ಬಾಳಿಗಟ್ಟಿ ಅವರನ್ನುನೇಮಿಸಲಾಗಿದೆ.ಹಳೆಯ ಪುಣೆ- ಬೆಂಗಳೂರು ರಸ್ತೆಯ ಬಳಿ ಇರುವ ವೆಂಕಟೇಶಎಂಟರ್ಪ್ರೈಸಸ್ ಗೆ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಕೆ.ಎಲ್.ಶ್ರೀನಿವಾಸ್‌ಅವರನ್ನು ಕ್ಯಾಂಪ ಆಫೀಸರ್ ನ್ನಾಗಿ ನೇಮಿಸಲಾಗಿದೆ. ಹೊನಗಾದಲ್ಲಿರುವ ಎಮ್.ಎಸ್.ಪಿ.ಎಲ್.ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವಳವಟ್ಟಿ ಅವರನ್ನು ಮೇಲುಸ್ತುವಾರಿಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಅದೇ ರೀತಿ, ಉದ್ಯಮಬಾಗದಲ್ಲಿರುವ ಸುಯಶ್ ಇಂಜಿನಿಯರಿAಗ್ ಕಂಪನಿಗೆಜವಳಿ ಇಲಾಖೆ ಉಪ ನಿರ್ದೇಶಕರಾದ ವಾಸುದೇವ ದೊಡಮನಿ ಅವರನ್ನು ಕ್ಯಾಂಪ ಆಫೀಸರ್‌ನ್ನಾಗಿ ನೇಮಿಸಲಾಗಿದೆ. ಮಚ್ಚೆಯಲ್ಲಿರುವ ಕೊಲ್ಹಾಪುರ ಆಕ್ಸಿಜನ್ ಕಂಪನಿಗೆ ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿಗಳಾದ ಎಸ್.ಎಸ್. ಬಡಿಗೇರ ಅವರನ್ನು ಮೇಲುಸ್ತುವಾರಿಅಧಿಕಾರಿಯಾಗಿ ನೇಮಿಸಲಾಗಿದೆ. ನಿಪ್ಪಾಣಿಯಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳಾದ ಬ್ರಹ್ಮನಾಥ ಗ್ಯಾಸ್ ಏಜೆನ್ಸಿಗೆ ಚಿಕ್ಕೋಡಿಯ ಪ.ರಾಂ.ಇಎಂ .ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಹೊನ್ನಾವರ ಹಾಗೂ ಮಹಾ ಆಕ್ಸಿಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ  ಜಿಲ್ಲಾಪರಿಸರ ಅಧಿಕಾರಿಗಳಾದ ಜಗದೀಶ ಅವರನ್ನು ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಗೋಕಾಕ್ ದಲ್ಲಿರುವಚೇತನ್ ಗ್ಯಾಸ್ ಏಜನ್ಸಿಗೆ ಗೋಕಾಕ್ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದಭೀಮಪ್ಪ ಲಾಳಿ ಅವರನ್ನು ಮೇಲುಸ್ತುವಾರಿ ಅಧಿಕಾರಿಯಾಗಿ ನೇಮಿಸಲಾಗಿದೆ.ಅದೇ ರೀತಿ, ಅಥಣಿಯಲ್ಲಿರುವ ಸಮ್ರೀನ್ ಇಂಡಸ್ಟ್ರಿಯಲ್ ಗ್ಯಾಸ್ ಏಜನ್ಸಿಗೆಅಥಣಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕಅಭಿಯಂತರರಾಗಿರುವ ದಯಾನಂದ ಹಿರೇಮಠ ಹಾಗೂ ಎಸ್.ಎಸ್.ಇಂಡಸ್ಟ್ರಿಯಲ್ ಆಕ್ಸಿಜನ್‌ಗೆ ಅಥಣಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಜಯಶ್ರೀ ಹಿರೇಮಠಅವರನ್ನು ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಸಂಕೇಶ್ವರದಲ್ಲಿರುವ ಮಲ್ಲಿಕಾರ್ಜುನ ಪಾರ್ಮಾ.ಗೆ ಹುಕ್ಕೇರಿಪಂ.ರಾ.ಇಮ್ .ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಎ.ಬಿ.ಪಟ್ಟಣಶೆಟ್ಟಿಅವರನ್ನು ಕ್ಯಾಂಪ ಆಫೀಸರ್‌ನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್ ತಿಳಿಸಿದ್ದಾರೆ.

ಏಜನ್ಸಿ ಹಾಗೂ ಕ್ಯಾಂಪ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಕಾಲಕಾಲಕ್ಕೆ ಸಲಹೆಹಾಗೂ ಸಹಕಾರ ನೀಡುವಂತೆ  ಭೂದಾಖಲೆಗಳಜಂಟಿ ನಿರ್ದೇಶಕರಾಗಿರುವ ನಿಸ್ಸಾರ ಅಹ್ಮದ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಲೋಪವೆಸಗಿದರೆಕಾನೂನುಕ್ರಮ:

ಕಾರ್ಯದಲ್ಲಿ ಲೋಪವೆಸಗಿದಂತಹ ಏಜನ್ಸಿಯ ಮಾಲೀಕರ ವಿರುದ್ಧ ವಿಪತ್ತುನಿರ್ವಹಣಾ ಕಾಯ್ದೆ 2005 ಕಲಂ 58 ರಿಂದ 60 ರಂತೆ ಕ್ರಿಮಿನಲ್ ಮೊಕದ್ದಮೆಯನ್ನುಹೂಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳಾದ ಡಾ.ಕೆ.ಹರೀಶ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Read More Articles