ಕೋವಿಡ್-೧೯ರ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರ ನೆರವಿಗೆ ಸಹಾಯವಾಣಿ ಸೌಲಭ್ಯ

ಬೆಳಗಾವಿ: ಕೋವಿಡ್-೧೯ರ ಜನತಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರ ನೆರವಿಗೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯ ವರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಹಾಯವಾಣಿ ಸೌಲಭ್ಯ ಕಲ್ಪಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಹಾಯವಾಣಿಗೆ ನಿಯೋಜಿಸಲಾಗಿದೆ.

promotions

ಬೆಳಗಾವಿಯ ರೇಷ್ಮೆ ಉಪನಿರ್ದೇಶಕರ ಜಿಲ್ಲಾ ಪಂಚಾಯತ ಕಚೇರಿಯ ದೂರವಾಣಿ ಸಂಖ್ಯೆ 0831-2951234 ಮೋ, ಸಂಖ್ಯೆ 9731734537 ಹಾಗೂ ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ನಿರ್ವಹಿಸುವ ರೇಷ್ಮೆ ನಿರೀಕ್ಷಕರಾದ ಆರ್.ಬಿ.ಬೂದಿಹಾಳ ಮೊ, ಸಂಖ್ಯೆ 9449912732, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯ ರವರೆಗೆ ಸಹಾಯವಾಣಿ ಸೌಲಭ್ಯ ಪಡೆಯಬಹುದು.

promotions

ಬೆಳಗಾವಿಯ ವಿಭಾಗ ಮಟ್ಟದಲ್ಲಿ ರೇಷ್ಮೆ ಪ್ರದರ್ಶಕರಾದ ಎಸ್.ಎ. ಚಿಕ್ಕಮಠ ಅವರ ಮೊ, ಸಂಖ್ಯೆ 9480055105 ಮಧ್ಯಾಹ್ನ 12 ರಿಂದ 3 ಗಂಟೆಯ ರವರೆಗೆ ಹಾಗೂ ರೇಷ್ಮೆ ಪ್ರವರ್ತಕರಾದ ಎಂ.ಬಿ. ಶೇಖ್ ಅವರ ಮೊ, ಸಂಖ್ಯೆ 9008442721 ಸಂಜೆ 3 ರಿಂದ 6 ಗಂಟೆಯ ರವರೆಗೆ ಸಹಾಯವಾಣಿಗೆ ನಿಯೋಜಿಸಲಾಗಿದೆ.

ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ 0831-2970145, ಮೊಬೈಲ್ ಸಂಖ್ಯೆ 9844964785 ಹಾಗೂ ಬೆಳಗಾವಿಯ ರೇಷ್ಮೆ ವಿಸ್ತರಣಾಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ 0831-2950235, ಮೊ, ಸಂಖ್ಯೆ 7411521824, ಬೈಲಹೊಂಗಲ, ಖಾನಾಪೂರ, ತಾಲೂಕಾಧಿಕಾರಿಗಳ ಮೊ, ಸಂಖ್ಯೆ 9945808687 ಸಹಾಯವಾಣಿ ಸಂಖ್ಯೆ ಆಗಿರುತ್ತವೆ.

ಕಿತ್ತೂರು ತಾಲೂಕು ಮೊ, ಸಂಖ್ಯೆ 9901589476, ಹುಕ್ಕೇರಿ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08333-265228, ಮೊ,ಸಂಖ್ಯೆ 9481979357 ಹಾಗೂ ಚಿಕ್ಕೋಡಿಯ ತಾಲೂಕಾಧಿಕಾರಿಗಳ ಮೊ,ಸಂಖ್ಯೆ 9900940769 ಸಹಾಯವಾಣಿಗಳಾಗಿವೆ.

ಗೋಕಾಕ ವಿಭಾಗ ಮಟ್ಟದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ 08332-2266641, ಮೊಬೈಲ್ ಸಂಖ್ಯೆ 8197875313, ಅಥಣಿಯ ರೇಷ್ಮೆ ವಿಸ್ತರಣಾಧಿಕಾರಿಗಳ ಮೊ, ಸಂಖ್ಯೆ 9945383374 ಹಾಗೂ ಗೋಕಾಕ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08332-227570, ಮೊ, ಸಂಖ್ಯೆ 8746010709 ಸಹಾಯವಾಣಿಗೆ ಕರೆ ಮಾಡಬಹುದು.

ರಾಯಭಾಗ ತಾಲೂಕಾಧಿಕಾರಿಗಳ ಮೊಬೈಲ್ ಸಂಖ್ಯೆ 8123639173, ರಾಮದುರ್ಗ ಸಂಖ್ಯೆ 9611783546 ಹಾಗೂ ಸವದತ್ತಿಯ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08330-222285, ಮೊ, ಸಂಖ್ಯೆ 8746010709 ಸಹಾಯವಾಣಿಯಾಗಿವೆ.

ರೇಷ್ಮೆ ಕೃಷಿ ಹಾಗೂ ರೇಷ್ಮೆ ಗೂಡು ಮಾರಾಟಕ್ಕೆ ಸಂಬಂಧಿಸಿದಂತೆ ಅಗತ್ಯ ಸೇವೆಗಳಿಗಾಗಿ ಜಿಲ್ಲಾ, ವಿಭಾಗ ಹಾಗೂ ತಾಲೂಕು ಮಟ್ಟದ ಕಚೇರಿ ಅಧಿಕಾರಿಗಳನ್ನು ನಿಗದಿತ ಸಮಯದಲ್ಲಿ ಕಚೇರಿಯ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More Articles