ಮಾರ್ಷಲ್‌ಗಳೊಂದಿಗೆ ಪಿಲ್ಡಿಗೆ ಇಳಿದ ಪಾಲಿಕೆ ಆಯುಕ್ತ, ಎಸಿ ತೇಲಿ

ಬೆಳಗಾವಿ:ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯ ವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರು ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್.

promotions

ಹಾಗೂ ಎಸಿ ಅಶೋಕ ತೆಲಿ ಮಾಸ್ಕ್ ಹಾಕಿಕೊಳ್ಳದ ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡರು. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಬೆಳಗಾವಿಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದರೂ ಜನರು ಮಾತ್ರ ನಿರ್ಲಕ್ಷ್ಯ‌ಮಾಡುತ್ತಿದ್ದಾರೆ.

promotions

ಜನರಿಗೆ ಪಾಠ ಕಲಿಸಲು ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಮಾರ್ಷಲ್ ತಂಡಗೊಳೊಂದಿಗೆ ನಗರದ ಪಿ.ಬಿ.ರಸ್ತೆ, ಮಾರ್ಕೇಟ್ ಪೊಲೀಸ್ ಠಾಣೆಯ ರಸ್ತೆ, ಶೆಟ್ಟಿಗಲ್ಲಿ, ಗಣಪತಿ ಗಲ್ಲಿ, ಕಂಬಳಿಕೂಟ, ಚವಾಟಗಲ್ಲಿ, ಜಿಲ್ಲಾಧಿಕಾರಿ ಆವರಣ, ಚನ್ನಮ್ಮ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಚರಿಸಿ ಮಾಸ್ಕ್ ಹಾಕಿಕೊಳ್ಳದ ಜನರಿಗೆ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು.

ಅಲ್ಲದೆ ನಿಗದಿತ ಅವಧಿ ಮುಗಿದಿದ್ದರೂ ಮಳಿಗೆಗಳನ್ನು ತೆರೆದು ಬೇಕಾಬಿಟ್ಟಿಯಾಗಿ ವ್ಯಾಪಾರ ಮಾಡುತ್ತಿದ್ದ ಮಳಿಗೆದಾರರಿಗೆ ಬಿಸಿ ಮುಟ್ಟಿಸಿದರು. ಅನಗತ್ಯವಾಗಿ ರಸ್ತೆ ಬಂದ ವಾಹನಗಳನ್ನು ಸೀಜ್ ಮಾಡುವ ಮೂಲಕ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.

Read More Articles