ಕೋವಿಡ್ ನಿಂದ ಮೃತಪಟ್ಟ ಅಂಗನವಾಡಿ ನೌಕರರಿಗೆ ಪರಿಹಾರ ನೀಡುವಂತೆ ಒತ್ತಾಯ

ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೋನಾ ವಾರಿರ‍್ಸ್ ಎಂದು ರಾಜ್ಯ ಸರಕಾರ ಇಲಾಖೆಯಿಂದ ಪತ್ರ ನೀಡಿದರೆ ಮಾತ್ರ ಕೆಲಸ ನಿರ್ವಹಿಸುತ್ತೇವೆ ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಬೆಳಗಾವಿ ತಾಲೂಕಾ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

promotions

ಕೋವಿಡ್-19 ಮೊದಲ ಅಲೆಯಲ್ಲಿ ಅಂಗನವಾಡಿ ನಭಕರರ ಮುಂಚೂಣಿಯಲ್ಲಿ ನಿಂತು ವಾರಿರ‍್ಸ್ ಆಗಿ ಕೆಲಸ ನಿರ್ವಹಿಸಿದ್ದಾರೆ. ರಾಜ್ಯದಲ್ಲಿ 28 ಜನ ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ತಗಲು ನಿಧನ ಹೊಂದಿದ್ದಾರೆ. ಆದರೆ ಸರಕಾರ ಹೇಳಿದ ವಿಮಾ ಮೊತ್ತ ಕೇವಲ ಒಬ್ಬರಿಗೆ ಮಾತ್ರ ಬಂದಿದೆ. ಕೂಡಲೇ ಉಳಿದ 27 ಜನ ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

promotions

Read More Articles