ಬೆಳಗ್ಗೆ ವಾಹನ ಸವಾರರ ಕಾಟ: ಮಧ್ಯಾಹ್ನ ಪೊಲೀಸರ ಆಟ...
- 15 Jan 2024 , 12:22 AM
- Belagavi
- 154
ಬೆಳಗಾವಿ : ರಾಜ್ಯದಲ್ಲಿ ಜನತಾ ಕಫ್ರ್ಯೂ ಮಾದರಿಯ ಕಠಿಣ ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಸರಕಾರದ ಕ್ರಮದಿಂದ ಬೆಳಗಾವಿ ಜಿಲ್ಲೆಯಲ್ಲಿ ಅವದಿಗೂ ಮೀರಿ ಬೇಬಾಬಿಟ್ಟಿ ವಾಹನಗಳ ಸಂಚಾರವನ್ನು ಕಡಿವಾಣ ಹಾಕುವಲ್ಲಿ ಪೊಲೀಸರು ಹರಸಾಹಪಟ್ಟರು.

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಜನರು ಮಾತ್ರ ಅನಗತ್ಯವಾಗಿ ಸಂಚಾರ ನಡೆಸಿದ್ದಾರೆ. ಬೆಳಗ್ಗೆ 6 ರಿಂದ 10 ರ ವರೆಗೆ ಹಾಲು, ಹಣ್ಣು, ಸರಾಯಿ ಅಂಗಡಿಗಳಿಗೆ ಅನುಮತಿ ನೀಡಿರುವ ಸರಕಾರದ ಅದನ್ನು ಕೊಂಡುಕೊಳ್ಳಲು ಸಾಮಾಜಿಕ ಅಂತರ ಮರೆತು ಮುಗಿ ಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸೋಮವಾರದಿಂದ ಕಠಿಣ ಲಾಕ್ ಡೌನ್ ಘೋಷಣೆ ಮಾಡಿರವ ರಾಜ್ಯ ಸರಕಾರದ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಸ್ವತಃ ವಾಹನ, ಗೂಡ್ಸ್ ಹಿಡಿದು ತೆರಳಿದರು. ಇದರಿಂದ ನಗರ ಪ್ರದೇಶದ ರಸ್ತೆಗಳಲ್ಲಿ ಸಂಚಾರ ದಟ್ಟನೆ ನಿರ್ಮಾಣವಾಗಿತ್ತು. ವಾಹನ ಸವಾರರನ್ನು ಸಾಗಿ ಹಾಕಲು ಪೊಲೀಸರು ಹರಸಾಹ ಪಡುತ್ತಿದ್ದರು.










