ರಾಯಬಾಗ ಎಪಿಎಮ್‌ಸಿ ಗೆ ಅವಿರೋಧ ಆಯ್ಕೆ
- 15 Jan 2024 , 2:50 AM
- Belagavi
- 100
ನಂತರ ಸದಸ್ಯರು ಸಭೆ ನಡೆಸಿ ಹಾಜರಿದ್ದ ಹನ್ನೂಂದು ಸದಸ್ಯರ ಉಪಸ್ಥಿತಿಯಲ್ಲಿ 3ನೇ ಹಂತದ 20ತಿಂಗಳ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತು ಒಮ್ಮತವನ್ನು ಕೈಗೂಂಡು ಅಧ್ಯಕ್ಷ ಸ್ಥಾನಕ್ಕೆ ಮಹಾದೇವ ನಿಂಗಪ್ಪಾ ಶೆಟ್ಟೆಪ್ಪಗೋಳ ಅಧ್ಯಕ್ಷರಾಗಿ ಆಯ್ಕೆಯಾದರೆ ಮಲಗೌಡ ಭೀಮಪ್ಪಾ ಪಾಟೀಲ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಗ್ಗೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಘೋಷಿಸಿದರು.
ನಂತರ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಹೂಮಾಲೆ ಹಾಕಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಲಕ್ಷ್ಮಣ ಉದ್ದಪ್ಪನವರ, ಕಾನೂನು ಸಲಹೆಗಾರರಾದ ಎಸ್.ಬಿ.ಹೋಳ್ಕರ, ವಸಂತರಾವ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ರಾಯಬಾಗ ಅದ್ಯಕ್ಷರು ಪ್ರತಾಪರಾವ್ ಪಾಟೀಲ. ಸಿ.ಬಿ.ಕುಲಗೂಡೆ, ಬಾಶಾಲಾಲ ವಾಟೆ, ಮಾಜಿ ಅಧ್ಯಕ್ಷ ಉಪಾಧ್ಯಕ್ಷರು ಇತರರು ಉಪಸ್ಥಿತರಿದ್ದರು.











