ಬೆಳಗಾವಿ: ಬೆಳೆ ನಾಶವಾಗಿದ್ದರಿಂದ ಮನನೊಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಗೊಜಗೆ ಗ್ರಾಮದಲ್ಲಿ ನಡೆದಿದೆ . ಮೃತ ರೈತ ಕೆಲ ದಿನಗಳ ಹಿಂದೆ ಮಾರುಕಟ್ಟೆಯಿಂದ ಆಲೂಗಡ್ಡೆ ಬೀಜ ತಂದು ಬಿತ್ತನೆ ಮಾಡಿದ್ದ ಅಲ್ಲದೇ ಅದಕ್ಕೆ ಬೇಕಾದ ರಸ ಗೊಬ್ಬರ, ಔಷದಿಗಾಗಿ ಸಾಕಷ್ಟು ವೆಚ್ಚ ಮಾಡಿದ್ದಾರೆ ಬಿತ್ತನೆ ಮಾಡಿದಾಗಿನಿಂದ ಸತತ ಸುರಿದ ಮಳೆಯಿಂದಾಗಿ ಆಲೂಗಡ್ಡೆ ಬೆಳೆ ನಾಶ ವಾಗಿದೆ ಹಾಗೂ ಸಾಲ ಸುಲ ಮಾಡಿ ಬೆಳೆ ಬೆಳದಿದ್ದರು ಇದರಿಂದ ಮನನೊಂದ ಅಶೋಕ ಕೃಷ್ಣಾ ಭಾಮಣೆ ಆತ್ಮಹತ್ಯೆಗೆ ಶರಣಾಗಿದ್ದರೆ ಈ ಘಟನೆ ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ