ಮೂಢನಂಬಿಕೆ ಸೆಡ್ಡು ಹೊಡೆದ ಮಾನವ ಬಂಧುತ್ವ ವೇದಿಕೆ

ಬೆಳಗಾವಿ: ನೆಹರು ನಗರದಲ್ಲಿರುವ ಮಾನವ ಬಂಧುತ್ವ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಯವರ ನೇತೃತ್ವದಲ್ಲಿ ಇಂದು ಕಗ್ರಾಸ್ ಸೂರ್ಯಗ್ರಹಣಿರುವಾಗಲೆ ಬಾಡೂಟ ಮಾಡಿ ಊಟ ಮಾಡುವ ಮೂಲಕ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

ಈ ವಿಸ್ಮಯಗಳ ಹಿಂದಿನ ಸತ್ಯಗಳನ್ನು ಮಕ್ಕಳಿಗೆ , ಆಸಕ್ತರಿಗೆ ತಿಳಿಸುವ ಕೆಲಸ ಮಾಡಬೇಕಿದೆ . ಗ್ರಹಣ ಸಂದರ್ಭದಲ್ಲಿ ಆಹಾರ , ಹಣ್ಣು ಪಾನಿಯ ಸೇವನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು . ಕೆಲವರು ಈ ಸಂದರ್ಭದಲ್ಲಿ ಮೌಡ್ಯ ಪ್ರಸಾರಕ್ಕೆ ತೊಡಗುತ್ತಾರೆ ಎಚ್ಚರವಾಗಿರಿ . ಕೆಲವರು ಈ ಗ್ರಹಣದಂದು ಭಯಭೀತಿ ಹುಟ್ಟಿಸಲು ಪೂಜೆ - ಪುನಸ್ಕಾರ , ಮನೆಯಿಂದ ಹೊರ ಬಾರದಿರುವುದು , ರಾಶಿ ಫಲ ಭಯ ಹುಟ್ಟಿಸುವುದು , ನೀರು , ಆಹಾರ ಪದಾರ್ಥ ಹೊರ ಚೆಲ್ಲುವುದು , ಇತ್ಯಾದಿ ಅವೈಜ್ಞಾನಿಕ ಆಚರಣೆ ಮಾಡುತ್ತಾರೆ . ಇವುಗಳನ್ನು ನಂಬಬಾರದು ಎಂದು ಇಂದು ಮಾನವ ಬಂಧುತ್ವ ವೇದಿಕೆ ಕರೆ ನೀಡಿತು.

ಈ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ , ರಾಹುಲ ಜಾರಕಿಹೊಳಿ , ಶ್ರೀಶೈಲ ಅಂಟಿನ , ಹಬೀಬ ಶಿಲ್ಲೇದಾರ , ಗೋಕಾಕ ಮೂಡಲಗಿ ತಾಲುಕು ಸಂಚಾಲಕರು , ಕಾರ್ಯಕರ್ತರು ಭಾಗವಹಿಸಿದ್ದರು .

promotions

Read More Articles