ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ಜೀರಲಿ

ಬೆಳಗಾವಿ: ಶಾಸಕರ ಅನುದಾನದಲ್ಲಿ ವಿರೋಧ ಪಕ್ಷ ನೂರು ಕೋಟಿ ರು. ವ್ಯಾಕ್ಸಿನ್ ಖರೀದಿಗೆ ನೀಡಲಾಗುವುದು ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜಂಟಿಯಾಗಿ ಘೋಷಣೆ‌ ಮಾಡಿದ್ದಾರೆ. ಇದು ಅಪಪ್ರಚಾರದ ಹೇಳಿಕೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜೀರಲಿ ಅಸಮಾಧಾನ ವ್ಯಕ್ತಪಡಿಸಿದರು.

promotions

ಬುಧವಾರ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹಿರಿಯ ರಾಜಕಾರಣಿಗಳು ನಾವು ಅವರು ನೂರು ಕೋಟಿ ರು. ಹಣವನ್ನು ವ್ಯಾಕ್ಸಿನ್ ‌ಖರೀದಿಗೆ ಕೊಡುವಾಗ ನಾವು ಸಂತೋಷ ಪಟ್ಟಿದ್ದೇವು.‌ಆದರೆ ಅವರು ಶಾಸಕರ ಅನುದಾನ ನೀಡಲು ಮುಂದಾಗುತ್ತಿದ್ದಾರೆ ಅದು ಹಾಸ್ಯಾಸ್ಪದ.

promotions

ಇಂಥ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಗ್ರಾಮೀಣ ಭಾಗದ ಜನರು ಆತಂಕ ಪಡುವ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮ ವಹಿಸಿಕೊಂಡರೇ ಸಾಕು ಎಂದರು.

Read More Articles