ಹೆಬ್ಬಾಳ್ಕರ್‌ಗೆ ಟಾಂಗ್ ಕೊಟ್ಟ ಕಾರಜೋಳ
- 14 Jan 2024 , 11:23 PM
- Belagavi
- 108
ಬೆಳಗಾವಿ :ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಡುವ ಆರೋಪದಲ್ಲಿ ಹುರುಳಿರಬೇಕು. ಅವರ ಕ್ಷೇತ್ರ ನಗರ ಪ್ರದೇಶಕ್ಕೆ ಹೊಂದಿಕೊಂಡು ಬರುವ ಕ್ಷೇತ್ರ ಇಲ್ಲಿ ಎಲ್ಲ ಶಾಸಕರು ಬಂದಿದ್ದಾರೆ.

ಅವರು ಬಂದು ಸಲಹೆ ಕೊಡಬೇಕಿತು ಯಾಕೆ ಬರಲಿಲ್ಲ ? ಎಂದು ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಶಾಸಕಿ ಹೆಬ್ಬಾಳ್ಕರ್‌ಗೆ ಟಾಂಗ್ ನೀಡಿದರು. ಗುರುವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾನು ಕೊರೋನಾ ವಿಚಾರದಲ್ಲಿ ಸಲಹೆ ನೀಡಲು ಪಕ್ಷಾತೀತವಾಗಿ ಆಹ್ವಾನ ನೀಡುತ್ತೇವೆ. ಎಲ್ಲ ಶಾಸಕ, ಸಂಸದರು ಸಭೆಗೆ ಬಂದಿದ್ದಾರೆ. ಅವರು ಯಾಕೆ ಬರಲಿಲ್ಲ. ವಿನಾಕಾರಣ ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸರಕಾರದ ಜತೆಗೆ ಕೈ ಜೋಡಿಸಬೇಕು ಎಂದರು.










