ಐಎಎಸ್​ ಅಧಿಕಾರಿ ವಿಜಯ ಶಂಕರ್ ಆತ್ಮಹತ್ಯೆ

ಬೆಂಗಳೂರು: ಹಿರಿಯ ಐಎಎಸ್​ ಅಧಿಕಾರಿ ವಿಜಯ ಶಂಕರ್ (59) ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ತಿಲಕ್ ನಗರ ಪೊಲೀಸರು ದೌಡಾಯಿಸಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಇವರ ಮೇಲೆ ಸಾಕಷ್ಟು ಅಕ್ರಮದ ಆರೋಪಗಳು ಕೇಳಿ ಬಂದಿತ್ತು.
ಐಎಮ್‌ಎ ಹಗರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಓರ್ವರಾಗಿದ್ದ ವಿಜಯ್‌ ಶಂಕರ್‌ ಹೆಸರನ್ನು ಪೋಲಿಸರು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ್ದರು. ಇದೇ ವಿಚಾರದಲ್ಲಿ ಸಿಬಿಐ ಇವರಿಗೆ ನೋಟೀಸ್‌ ನೀಡಿತ್ತು. ಇದರಿಂದ ಕಳೆದ ಒಂದು ವಾರದಿಂದ ವಿಜಯ್‌ ಶಂಕರ್‌ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.

promotions

Read More Articles