ಬಿಜೆಪಿ ಸರ್ಕಾರದ ಮೇಲೆ ಟ್ವಿಟ್ ಮೂಲಕ ಚಾಟಿ ಬಿಸಿದ ಹೆಬ್ಬಾಳ್ಕರ್

ಬೆಳಗಾವಿ:ಡಿಕೆಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ನಲ್ಲಿ ಕೊವೀಡ ರೋಗಿಗಳಿಗೆ ಲಸಿಕೆ ಯೋಜನೆ ಸಿದ್ಧವಾಗಿದೆ:ಶಾಸಕಿ ಹೆಬ್ಬಾಳಕರ ಸರಕಾರದ ವಿರುದ್ದ ಅಸಮಾಧಾನ.

promotions

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸಿದ್ದು ಆಮ್ಲಜನಕ, ಹಾಸಿಗೆಗಳು,ಔಷಧಿಗಳು, ಲಸಿಕೆಗಳ ಕೊರತೆ ಜನರು ಸಾಯುತ್ತಿದ್ದಾರೆ.ಸರ್ಕಾರ ಏನು ಮಾಡುತ್ತಿದೆ? ಡಿಕೆಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ನಲ್ಲಿ ಯೋಜನೆ ಸಿದ್ಧವಾಗಿದೆ! ಎಂದು ಸರಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ತಜ್ಞರು ಈಗಾಗಲೇ ಎರಡನೇ ಕೋವಿಡ್ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು, ಸಹ ರಾಜ್ಯ ಸರಕಾರ ನಿದ್ರೆಗೆ ಜಾರಿದೆ. ಇದರಿಂದ ಜನರು ಸಾಯುತ್ತಿದ್ದಾರೆ, ಸರ್ಕಾರ ಕೋವಿಡ್ ನಿರ್ವಹಣೆ ಶೂನ್ಯವಾಗಿದೆ.

ಈ ಕೋವಿಡ್ -19 ಯುಗದಲ್ಲಿ ಕರ್ನಾಟಕದ ಜನರಿಗೆ ಪರಿಹಾರ ಬೇಕು ಮತ್ತು ಇದು ವ್ಯಾಕ್ಸಿನೇಷನ್ ಆಗಿದೆ. ಬಿಜೆಪಿ ಸರ್ಕಾರದಿಂದ ರಾಜ್ಯವನ್ನು ನಿರಾಶೆಗೊಳಿಸಿದ ಅವರು, ರಾಜ್ಯಕ್ಕೆ ಲಸಿಕೆಗಳನ್ನು ಸಂಗ್ರಹಿಸುವ 100 ಕೋಟಿ ಯೋಜನೆಯನ್ನು ಜಾರಿಗೆ ತರಲು ಕರ್ನಾಟಕ ಕಾಂಗ್ರೆಸ್ಗೆ ಅವಕಾಶ ನೀಡಬೇಕು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇಲ್ಲದಿದ್ದರೂ ಸಹ ಜನರ ಸೇವೆಗೆ ಸಿದ್ದವಾಗಿದೆ ಕೋವಿಡ ಲಸಿಕೆಗೆ 100 ಕೋಟಿ ನೀಡಲು ಮುಂದಾಗಿದೆ ಆದರೂ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ತಿಳಿಸಿದರು.

Read More Articles