ಕೊರೋ‌ನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಬಾರದ ಜನ: ಆಪತ್ ಬಾಂಧವನಾದ ಇಂಗಳೆ

ಬೆಳಗಾವಿ: ದಿನ ನಿತ್ಯ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನ ಎರಡನೇ ಅಲೆಯ ಅಬ್ಬರಕ್ಕೆ ರಾಜ್ಯಾದ್ಯಂತ ನಿತ್ಯ ಸಾವಿನ ಸಂಖ್ಯೆ ಹೆಚ್ಚುತ್ತಲೆ ಸಾಗಿದೆ. ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಯಾರು ಬಾರದೆ ಮೃತಪಟ್ಟ ಕುಟುಂಬಸ್ಥರು ಪರದಾಟ ಹೇಳತೀರದು.

promotions

ಅಂತದ್ರಲ್ಲಿ ಇಲ್ಲೊಬ್ಬರು ಕೊರೊನ ಸೊಂಕಿನಿಂದ ಮೃತಪಟ್ಟ ಶವಗಳನ್ನ ಶವ ಸಂಸ್ಕಾರ ಮಾಡುವ ಮೂಲಕ ಸಾವಿನ ಮನೆಯವರ ಪಾಲಿಗೆ ಆಪತ್ತು ಬಾಂಧವನಾಗಿ ಮಾನವೀಯತೆ ಮೆರೆಯುತ್ತಿದ್ದಾರೆ. ಹೌದು ಗಡಿಭಾಗ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕೊವಿಡ್ ಎರಡನೇ ಅಲೆ ಆರಂಭವಾದಾಗಿನಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ.

promotions

ಸೊಂಕು ಹಬ್ಬದಂತೆ ರಾಜ್ಯ ಸರ್ಕಾರದ ಶವ ಸಂಸ್ಕಾರಕ್ಕೂ ಐದು ಜನರು ಭಾಗವಹಿಸುವಂತೆ ನಿರ್ಬಂಧ ಹೇರಿದ್ದು, ಜೊತೆಗೆ ಸೊಂಕು ತಗುಲುವ ಆತಂಕದಿಂದ ಜನರು ಕೂಡ ಬಾರದೆ ಎಷ್ಟೋ ಕುಟುಂಬಗಳು ಮಮ್ಮುಲು ಮರಗಿವೆ. ಇಂತಹ ಪರಿಸ್ಥಿತಿಯಲ್ಲಿ ಸಂಕೇಶ್ವರ ಪಟ್ಟಣದ ಪ್ರಕಾಶ ಇಂಗಳೆ ಯಾವುದೇ ಆತಂಕ ಪಡೆದ ಕಳೆದ ಒಂದು ತಿಂಗಳಿಂದ ಕೊವಿಡ್ ಸೊಂಕಿನಿಂದ ಮೃತಪಟ್ಟ 25 ಮತ್ತು ಕೊವಿಡೇತರ ಸೇರಿ ಸುಮಾರು 50 ಶವಗಳನ್ನ ಆಯಾ ಧರ್ಮದ ವಿಧಿವಿಧಾನಗಳ ಪ್ರಕಾರ ಸಂಸ್ಕಾರ ಮಾಡಿದ್ದು ಪಟ್ಟಣದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಇವರು ಈ ಹಿಂದೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಾಯಿದ್ದರು. ಇದರ ಜೊತೆಗೆ ಕಳೆದ ಕೆಲವು ವರ್ಷದಿಂದ ಪಟ್ಟಣದಲ್ಲಿಯೆ ಯಾರೆ ಮೃತಪಟ್ಟರು ಸ್ವತ ಇಚ್ಚೆಯಿಂದ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಶವ ಸಂಸ್ಕಾರ ಮಾಡುತ್ತ ಸಮಾಜಕ್ಕೆ ವಿಭಿನ್ನ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಈತನ ಕಾರ್ಯವನ್ನು ಮೆಚ್ಚಿ ಇಲ್ಲಿಯ ಪ್ರಮುಖರು ಕಳೆದ ಏಳು ತಿಂಗಳ ಹಿಂದೆ ಪುರಸಭೆಯಲ್ಲಿ ಪೌರ ಕಾರ್ಮಿಕನಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದಾರೆ. ಪೌರ ಕಾರ್ಮಿಕ ವೃತ್ತಿ ಜೊತೆಗೆ ಯಾವುದೇ ಅಪೇಕ್ಷೆ ಇಲ್ಲದೆ ಹಗಲು ರಾತ್ರಿ ಎನ್ನದೇ ಮೃತಪಟ್ಟ ಕುಟುಂಬಗಳಿಗೆ ಹೆಗಲು ಕೊಡುವ ಕಾರ್ಯ ಮುಂದುವರಿಸಿದ್ದಾರೆ.

ಪ್ರಕಾಶ ಇಂಗಳೆ ಅವರ ಕುಟುಂಬದವರು ಕೂಡ ಕೊವಿಡ್ ಸಮಯದಲ್ಲಿ ಯಾವುದೇ ಆತಂಕ ಪಡದೆ, ಇವರ ಕಾರ್ಯಕ್ಕೆ ಬೆಂಬಲವಾಗಿ ನಿಂತು ಎಲ್ಲರೂ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಕೊರೊನ ಸಮಯದಲ್ಲಿ ಮೃತಪಟ್ಟರೆ ಸ್ವಂತ ಸಂಬಂಧಿಕರೆ ಮುಂದೆ ಬರುತ್ತಿಲ್ಲ.

ಆದರೆ ಇಂಗಳೆ ಅವರ ಕುಟುಂಬ ಸದಸ್ಯರು ಹಿಂಜರಿಯದೆ, ಆತಂಕ ಪಡದೆ ಬೆಂಬಲಿಸುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಹೇಳವುದಾದರೆ ಕೊರೊನ ಸೊಂಕಿನಿಂದ ಮೃತಪಟ್ಟ ಶವಗಳನ್ನ ಕುಟುಂಬಸ್ಥರು ಮುಟ್ಟಲು ಹಿಂಜರಿಯುತ್ತಿರುವ ಸಂದರ್ಭದಲ್ಲಿ ಪ್ರಕಾಶ ಇಂಗಳೆ ಅವರು ಜೀವದ ಹಂಗು ತೊರೆದು ಶವ ಸಂಸ್ಕಾರ ಮಾಡುತ್ತಿರುವುದು ಮಾತ್ರ ವಿಶೇಷ ಹಾಗೂ ಮಾನವೀಯತೆಯ ಕಾರ್ಯವಾಗಿದೆ.

Read More Articles