ಹುಕ್ಕೇರಿ ಶ್ರೀಗಳು ಸೂಚಿಸಿದ 50 ವಿದ್ಯಾರ್ಥಿಗಳಿಗೆ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಕೋಸ್೯ ಕಲಿಸಲು ಮುಂದಾದ ಡಾ. ರವಿ ಪಾಟೀಲ

ಬೆಳಗಾವಿ: ಕೊವೀಡ್ ಸಂಕಷ್ಟದ ಕಾಲದಲ್ಲಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಬೆಳಗಾವಿ ಜನರ ರಕ್ಷಣೆಗಾಗಿ ಜಿಲ್ಲೆಗೆ ಎರಡು ಅಂಬುಲೆನ್ಸ್ ಹಾಗೂ ಕೋವಿಡ್ ಔಷಧಿಯ ಕಿಟ್ ನೀಡುವುರದ ಜತೆಗೆ ಆಹಾರದ ಕಿಟ್ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

promotions

ಇವರ ಪ್ರಭಾವಕ್ಕೆ ಒಳಗಾಗಿ ವಿಜಯಾ ಆಸ್ಪತ್ರೆಯಿಂದ 50ಜನ ವಿದ್ಯಾರ್ಥಿಗಳಿಗೆ ಎಮರ್ಜನ್ಸಿ ಮ್ಯಾನೆಜಮೆಂಟ್ ಕೋರ್ಸ್ನ್ನು ಶ್ರೀಗಳು ಸೂಚಿಸಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದು ಡಾ. ರವಿ ಪಾಟೀಲ ಶ್ರೀಗಳಿಗೆ ಮನವಿ ಪತ್ರ ಸಲ್ಲಿಸಿ ವಿನಂತಿಸಿದ್ದಾರೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಈ ಭಾಗದ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಾಕಷ್ಟು ಸಮಾಜಮುಖಿ ಹೋರಾಟ ಮಾಡುವುರದ ಮೂಲಕ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡಿದ್ದಾರೆ.

promotions

ಅಲ್ಲದೆ, ಬೆಳಗಾವಿಯಲ್ಲಿ ಕೆಲ ವರ್ಷಗಳ ಹಿಂದೆ ಬಂದ ಪ್ರವಾಹದ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಮಿಡಿದ ಶ್ರೀಗಳು ವಿವಿಧ ಕಡೆಗಳಲ್ಲಿ ಅನ್ನದಾನ, ಸಂತ್ರಸ್ತರಿಗೆ ಸಹಾಯ ಮಾಡುತ್ತ ಬಂದಿರುವ ಶ್ರೀಗಳು ಕೋವಿಡ್ ಸಂದರ್ಭದಲ್ಲಿಯೂ ರಾಜ್ಯ ಸರಕಾರದ ನೆರವಿಗೆ ಧಾವಿಸಿ ಜಿಲ್ಲೆಯ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಅಂಬುಲೆನ್ಸ್ಗಳನ್ನು ನೀಡಿದ್ದು, ಸ್ವಾಗತಾರ್ಹ. ಅಲ್ಲದೆ, ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಕೋವಿಡ್ ಔಷಧ ಕಿಟ್ ನೀಡುವುರದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಜತೆಗೆ ಗ್ರಾಮೀಣ ಭಾಗದ ಹಳ್ಳಿಗಳಿಗೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಡಿಸಿಎಂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಅವರ ಮೂಲಕ ಹಳ್ಳಿಗಳಲ್ಲಿ ವೈದ್ಯರ ತಂಡ ಕಳುಹಿಸಿ ಅಲ್ಲಿನ ಜನರ ಆರೈಕೆ ಮಾಡುವಲ್ಲಿ ತೊಡಗಿಕೊಳ್ಳಬೇಕೆಂದು ಸಂದೇಶ ರವಾನೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗ ವೈದ್ಯರ ನಡೆ ಹಳ್ಳಿಗಳ ಕಡೆ ಎಂದು ಘೋಷಣೆ ಮಾಡಿದ್ದು, ಅಭಿಮಾನದ ಸಂಗತಿ.

ಶ್ರೀಗಳ ಕೋವಿಡ್ ಸಂದರ್ಭದಲ್ಲಿ ಮಾಡುತ್ತಿರುವ ಕೆಲಸವನ್ನು ಕಂಡು ಶ್ರೀಗಳ ಸೂಚಿಸಿದ 50 ವಿದ್ಯಾರ್ಥಿಗಳಿಗೆ ಡಾ.ರವಿ ಪಾಟೀಲ ಶಿಕ್ಷಣ ಸೇವಾ ಸಂಸ್ಥೆ ವತಿಯಿಂದ ಉಚಿತವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಯಾದ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ಎಮರ್ಜನ್ಸಿ ಮ್ಯಾನೆಜಮೆಂಟ್ ಕೋರ್ಸ್ನ್ನು ಕಲಿಸಿಕೊಡಲು ಸಿದ್ದರಿದ್ದೇವೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ. ರವಿ ಪಾಟೀಲ ಮನವಿಯಲ್ಲಿ ಶ್ರೀಗಳಿಗೆ ತಿಳಿಸಿದ್ದಾರೆ.

Read More Articles