ವಿಕಲಚೇತನರಿಗೆ ಕೋವಿಡ್- ಶಿಲ್ಡ್ ಹಾಕಿದ ಸಮೃದ್ದಿ ಸೇವಾ ಸಂಸ್ಥೆ
- 15 Jan 2024 , 1:24 AM
- Belagavi
- 121
ಬೆಳಗಾವಿ: ಸಮೃದ್ದಿ ಸೇವಾ ಸಂಸ್ಥೆ, ಸಮರ್ಥನ ಅಂಗವಿಕಲ ಸಂಸ್ಥೆ, ಅಸೋಸಿಯೇಷನ್ ಆಫ್ ಫಿಜಿಕಲ್ ಹ್ಯಾಂಡಿಕ್ಯಾಫ್ಟ್ ಸಂಯುಕ್ತಾಶ್ರದಲ್ಲಿ ಮಂಗಳವಾರ ವಿಕಲಚೇತನರು ಹಾಗೂ ಅವರ ಪೋಷಕರಿಗೆ ಸುಮಾರು 400 ಜನರಿಗೆ ಸದಾಶಿವ ನಗರದ ಸಮೃದ್ದಿ ಸೇವಾ ಸಂಸ್ಥೆಯಲ್ಲಿ ಕೋವಿಡ್ ಶಿಲ್ಡ್ ಲಸಿಕೆ ನೀಡಲಾಯಿತು.

ಮಂಗಳವಾರ ಸದಾಶಿವ ನಗರದಲ್ಲಿರುವ ಸಮೃದ್ದಿ ಸೇವಾ ಸಂಸ್ಥೆಯಲ್ಲಿ ವಿಕಲಚೇತನ ಮಕ್ಕಳು ಹಾಗೂ ಪೋಷಕರಿಗೆ ಕೋವಿಡ್ ಶಿಲ್ಡ್ ಲಸಿಕೆ ಹಾಕಲಾಯಿತು.

ಸದಾ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿರುವ ಬಿಜೆಪಿ ಮುಖಂಡ ವೀರೇಶ ಕಿವುಡಸಣ್ಣವರ ಲಾಕ್ ಡೌನ್ ವೇಳೆಯಲ್ಲಿ ನಿರ್ಗತೀಕರು, ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಿಕೊಂಡು ಬರುತ್ತಾರೆ. ಇಡೀ ವಿಶ್ವವನ್ನೆ ತಲ್ಲಣ ಮೂಡಿಸಿರುವ ಕೊರೋನಾ ಸೋಂಕಿನ ಮಹಾಮಾರಿಯ ವಿರುದ್ದ ದೇಶವೇ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದೆ.
ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್, ಕೋವಿಡ್ ಶಿಲ್ಡ್ ಲಸಿಕೆಯನ್ನು ಹಾಕಲಾಗುತ್ತಿದೆ. ವಿಕಲಚೇತನರು ಸರದಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುವುದು ಕಷ್ಟವಾಗುತ್ತದೆ.
ಇದನ್ನು ಮನಗಂಡ ಅವರು, ಸಮೃದ್ದಿ ಸೇವಾ ಸಂಸ್ಥೆ, ಸಮರ್ಥನ ಅಂಗವಿಕಲ ಸಂಸ್ಥೆ, ಅಸೋಸಿಯೇಷನ್ ಆಫ್ ಫಿಜಿಕಲ್ ಹ್ಯಾಂಡಿಕ್ಯಾಫ್ಟ್ ಸಂಯುಕ್ತಾಶ್ರದಲ್ಲಿ ವಿಕಲಚೇತನರು ಸೇರಿದಂತೆ ಅವರ ಪೋಷಕರಿಗೆ ಸುಮಾರು 400 ಜನರಿಗೆ ಕೋವಿಡ್ ಶಿಲ್ಡ್ ನ ಮೊದಲ ಡೋಸ್ ಲಸಿಕೆ ನೀಡಿ ಜನರ ಪ್ರೀತಿಗೆ ಪಾತ್ರರಾದರು.
ಸಮರ್ಥನ ಅಂಗವಿಕಲ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕಿವುಡಸಣ್ಣವರ, ಸಮೃದ್ದಿ ಸೇವಾ ಸಂಸ್ಥೆಯ ಅಧ್ಯಕ್ಷ ಅಧ್ಯಕ್ಷ ವೀರೇಶ ಕಿವಣಸಣ್ಣವರ, ಗೀತಾ ಕೋಳಿ, ಲೀನಾ ಟೋಪಣ್ಣವರ, ಪಾಲಿಕೆ ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ ಸೇರಿದಂತೆ ಮುಂತಾದವರು ಹಾಜರಿದ್ದರು.










