ಜಿಲ್ಲೆಯ ಎಲ್ಲಾ ಶಾಸಕರು ಆಕ್ಸಿಜನ್ ಕಿಟ್ ನೀಡಲಿ: ಸತೀಶ ಜಾರಕಿಹೊಳಿ ಮನವಿ

ಗೋಕಾಕ: ಇಲ್ಲಿನ ಗೃಹಕಚೇರಿ ಹಿಲ್ ಗಾಡರ್ನ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ "ಸತೀಶ ಜಾರಕಿಹೊಳಿ" ಅವರು ಯಮಕನಮರಡಿ ಕ್ಷೇತ್ರದ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬುಧವಾರ "ಆಕ್ಸಿಜನ್ ಕಿಟ್" ವಿತರಿಸಿ, ಕೊರೋನಾ ಜಾಗೃತಿ ಮೂಡಿಸಿದರು.

promotions

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ "ಸತೀಶ ಜಾರಕಿಹೊಳಿ" ಅವರು ಮಾತನಾಡಿ, " ಸರ್ಕಾರ ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ 25% ರಷ್ಟು ಅನುದಾನ ಮೀಸಲಿದೆ. ಜನರ ತುರ್ತು ಸೇವೆಗಾಗಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ನೀಡಲಾಗುತ್ತಿದೆ. ಎರಡ್ಮೂರು ದಿನಗಳಲ್ಲಿ ಜನತೆ ಸೇವೆಗಾಗಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ.

promotions

ಜಿಲ್ಲೆಯ ಎಲ್ಲಾ ಶಾಸಕರು ಆಕ್ಸಿಜನ್ ಕಿಟ್ ನೀಡಲಿ:

ಇದರಿಂದ ಸಾವಿರಾರೂ ರೋಗಿಗಳಿಗೆ ಅನುಕೂಲವಾಗಲಿದೆ. ಇಲ್ಲಿನ ಜನತೆ ಸೂಕ್ಷ್ಮತೆಯನ್ನು ಕಾಪಾಡಿಕೊಂಡರೇ ಯಮಕನಮರಡಿ ಕ್ಷೇತ್ರದಲ್ಲಿ ಆದಷ್ಟೂ ಬೇಗ ಕೊರೋನಾಗೆ ಮುಕ್ತಿ ನೀಡಬಹುದು" ಎಂದರು.

ಜಿಲ್ಲೆಯ ಎಲ್ಲಾ ಶಾಸಕರು ಕೈಜೋಡಿಸಿ, ಕ್ಷೇತ್ರದ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಿಟ್ ನೀಡಿದರೆ ರೋಗಿಗಳಿಗೆ, ವೈದ್ಯರಿಗೆ ಅನುಕೂಲವಾಗಿಲಿದೆ. ಶಾಸಕರು, ಕ್ಷೇತ್ರಗಳಿಗೆ ಈ ಯೋಜನೆ ಕಲ್ಪಿಸಲು ಮುಂದಾಗಲಿ ಎಂದು ಮನವಿ ಮಾಡಿಕೊಂಡರು. ಜನಸೇವೆಗಾಗಿ ಈಗಾಗಲೇ ಕ್ಷೇತ್ರದಲ್ಲಿ ಮಗ್ನರಾಗಿದ್ದಾರೆ ಎಂದರು.

ಹುಕ್ಕೇರಿ ತಾಲೂಕ ವೈದ್ಯಾಧಿಕಾರಿ ಡಾ. ಉದಯ ಕುಡಚಿ ಮಾತನಾಡಿ, "ಸತೀಶ ಜಾರಕಿಹೊಳಿ" ಅವರು ಆಕ್ಸಿಜನ್ ನೀಡುತ್ತಿರುವುದು ಹೆಮ್ಮೆಯ ವಿಷಯ, ರೋಗಿಗಳಿಗೆ ಒಳಿತ ಆಗಲಿದೆ. ಕ್ಷೇತ್ರದಲ್ಲಿ ಹಗಲಿರುಳು ಕೊರೋನಾ ಜಾಗೃತಿ ಮೂಡಿಸಿದ್ದಾರೆ. ಲಕ್ಷಾಂತರ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದಾರೆ. ವೈದ್ಯರ ಜತೆ ಶಾಸಕರು ಕೈ ಜೋಡಿಸಿದ್ದರಿಂದ ನಮಗೆ ಆನೆ ಬಲ ಬಂದತಾಗಿದೆ.

ಸಂಗ್ಧಿದ ಸ್ಥಿತಿಯಲ್ಲಿ ಚಿಕಿತ್ಸೆಗೆ ಜತೆ ಆಕ್ಸಿಜನ್ ತೆಗೆದುಕೊಳ್ಳುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ. ಜನರ ಹಿತದೃಷ್ಟಿಯಿಂದ ಈ ವ್ಯವಸ್ಥೆ ಕಲ್ಪಿಸಿದ "ಸತೀಶ ಜಾರಕಿಹೊಳಿ" ಅವರಿಗೆ ಅಭಿನಂದನೆ ಎಂದರು. ಈ ಸಂದರ್ಭದಲ್ಲಿ ಡಾ. ರವಿ ಅಂಟಿನ್ , ವಿವೇಕ ಜತ್ತಿ, ಮಾರುತಿ ಗುಟಗುದ್ದಿ, ಪಾಂಡು ರಂಗ ಶುಭೆ, ಹುಕ್ಕೇರಿ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಇತರರು ಇದ್ದರು.

Read More Articles