ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಪ್ರೇಮಿಗಳು ನೇಣಿಗೆ ಶರಣು

ಬೆಳಗಾವಿ: ಸವದತ್ತಿ ತಾಲೂಕಿನ ಸಿಂದೂಗಿ ಗ್ರಾಮದಲ್ಲಿ ಮದುವೆಯ ನಂತರೂ ಅನೈತಿಕ ಸಂಬಂಧ ಹೊಂದಿದ್ದ ಪ್ರೇಮಿಗಳು ಗುರುವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಂಚಪ್ಪಾ, ಸಕ್ಕೂಬಾಯಿ ಕರಿಗಾರ ನೇಣಿಗೆ ಶರಣಾದ ಪ್ರೇಮಿಗಳು.

promotions

ಪಂಚಪ್ಪ ಹಾಗೂ ಸಕ್ಕೂಬಾಯಿ ಕಳೆದ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಇಬ್ಬರೂ ಕುಟುಂಬಸ್ಥರು ಅವಕಾಶ ನೀಡಿಲ್ಲ. ನಾಲ್ಕು ವರ್ಷಗಳ ಹಿಂದೆ ಪಂಚಪ್ಪ ಬೇರೆ ಯುವತಿ ಜತೆಗೆ ವಿವಾಹ ಮಾಡಿಕೊಂಡಿದ್ದ. ವಿವಾಹವಾದರೂ ಸಕ್ಕೂಬಾಯಿ ಜತೆಗೆ ಸಲುಗೆ ಹೊಂದಿದ್ದನು.

promotions

ಅಲ್ಲದೆ ಕಲ ತಿಂಗಳ ಹಿಂದೆ ಸಕ್ಕೂಬಾಯಿಗೆ ಬೇರೆ ಹುಡುಗನ ಜತೆಗೆ ವಿವಾಹ ಆಗಿದೆ. ತಿಂಗಳು ಕಳೆದರೂ ಸಕ್ಕೂಬಾಯಿ ಗಂಡನ ಮನೆಗೆ ಹೋಗಿಲ್ಲ. ಪಂಚಪ್ಪ ಹಾಗೂ ಸಕ್ಕೂಬಾಯಿ ಮದುವೆ ನಂತರವೂ ಅನೈತಿಕ ಸಂಬಂಧ ನಡೆಸಿದ್ದರು. ಗಂಡನ ಮನೆಗೆ ಹೋದರೆ ಇಬ್ಬರೂ ಬೇರೆ ಆಗುತ್ತೇವೆ ಎಂದು ಮನನೊಂದು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More Articles