ಕೋವಿಡ್ ಕೇರ್ ನಲ್ಲಿ ಇರುವ ಜನರಿಗೆ ದೈರ್ಯ ತುಂಬಿದ ಸಚಿವ ಬೊಮ್ಮಾಯಿ
- 14 Jan 2024 , 11:56 PM
- Haveri
- 118
ಶಿಗ್ಗಾಂವಿ: ಪಟ್ಟಣದಲ್ಲಿ ಇರುವ ತಮ್ಮ ನಿವಾಸದಲ್ಲಿ ಕ್ಷೇತ್ರದ ಜನತೆಗಾಗಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆಗುರುವಾರ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು.

ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯ ವಿಚಾರಿಸಿದರು. ಪ್ರತಿದಿನ ವೈದ್ಯೋಪಚಾರ ಚೆನ್ನಾಗಿ ಸಿಗುತ್ತದೆಯೇ? ಸರಿಯಾದ ಹೊತ್ತಿಗೆ ಊಟ- ಉಪಹಾರ ದೊರೆಯುತ್ತಿದೆಯೇ ಎಂದು ವಿಚಾರಿಸಿದರು.

ಧೈರ್ಯದಿಂದ ಇದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿರಿ ಎಂದು ಅವರು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.










