ಬಿಮ್ಸ ಸಮಸ್ಯೆಗೆ ಪರಿಹಾರ

ಬೆಳಗಾವಿ: ನರಕ ಸದೃಶವಾಗಿರುವ ಬೆಳಗಾವಿ ಜಿಲ್ಲಾಸ್ಪತ್ರೆಯ ಇಂದಿನ ಸಮಸ್ಯೆಗೆ ಎರಡು ಕಾರಣಗಳಿವೆ. ಮೊದಲನೆಯದಾಗಿ ನಗರದ ಸುತ್ತಮುತ್ತಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅಲ್ಲದೇ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂಧಿಯಿಲ್ಲ, ಪರೀಕ್ಷೆ ಮಾಡುವ ಉಪಕರಣಗಳು, ಇತರೆ ಸಲಕರಣೆಗಳೂ ಇಲ್ಲ.

promotions

ಹೀಗಾಗಿ ಸುತ್ತಲಿನ ಹಳ್ಳಿಯ ಜನ ಹಾಗೂ ನಗರ ಪ್ರದೇಶದ ಬಡಜನ ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸುವುದು ಅಸಧ್ಯವಾದ್ದರಿಂದ ಸಿವಿಲ್ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಇದರಿಂದಾಗಿ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಗದ್ದಲವಾತಾವರಣ ನಿರ್ಮಾಣ ಉಂಟಾಗುತ್ತಲಿದೆ. ಇಲ್ಲಿಯ ಉಪಕರಣಗಳು ಹಳೆ ಶತಮಾನದವುಗಳಾಗಿದ್ದಾಗಿವೆ.

promotions

ಇಂದಿನ ಈ ಕಾರ್ಯಕ್ಕೆ ಸಿಬ್ಬಂಧಿಗಳ ಹಾಗೂ ಯಂತ್ರೋಪಕರಣ ಕೊರತೆ ಎದ್ದು ಕಾಣುತ್ತಲಿದೆ. ಇದರಿಂದ ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಲಿದೆ. ಇಲ್ಲಿಯ ಸಿಬ್ಬಂಧಿ ಹಾಗೂ ಯಂತ್ರೋಪಕರಣಗಳನ್ನು ಹೆಚ್ಚಿಸಿದರೂ ಸಹ ಹೆಚ್ಚಿನ ಸಂಖ್ಯೆಯ ರೋಗಿಗಳು ಇಲ್ಲಿ ಬರುತ್ತಿರುವುದರಿಂದ ಎಲ್ಲರಿಗೂ ಚಿಕಿತ್ಸೆಯನ್ನು ನೀಡುವುದು ತುಂಬ ಕಷ್ಟ. ಈಗ ಕಾಡುತ್ತಲಿರುವ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಬೆಂಗಳೂರಿನ ವಾಣಿವಿಲಾಸ ಮಾದರಿಯಲ್ಲಿ ಎರಡು ಭಾಗಗಳನ್ನಾಗಿ ವಿಂಗಡಿಸುವುದೊಂದೆ  ಆಗಿದೆ.

ಕೇವಲ ಹೆಣ್ಣು ಮಕ್ಕಳಿಗಾಗಿ ಮೀಸಲಾದ ಸುಸಜ್ಜಿತವಾದ ಭಾಗವೊಂದಾದರೆ. ಗಂಡುಮಕ್ಕಳಾಗಿ ಇನ್ನೊಂದು. ಈಗಿರುವ ಸಿವಿಲ್ ಆಸ್ಪತ್ರೆಯನ್ನು ಎರಡು ಭಾಗಗಳನ್ನಾಗಿ ಮಾಡಲೇ ಬೇಕು. ಇದಕ್ಕಾಗಿ ಸಿಬ್ಬಂಧಿ ಹಾಗೂ ಯಂತ್ರೋಪಕರಣ, ಪರೀಕ್ಷಾ ಕೇಂದ್ರ ಹೀಗೆ ಕೋಟ್ಯಾಂತರ ರೂಪಾಯಿಗಳ ಖರ್ಚುವೆಚ್ಚ ಇದೆಯಾದರೂ ಇದು ಅನಿವಾರ್ಯವಾಗಿದೆ.

ತುರ್ತದ ಪರಿಸ್ತಿತಿಯಲ್ಲಿ ಸಿಬ್ಬಂಧಿ ಹೆಚ್ಚು ಮಾಡಿ ನೋಡಬಹುದು ಆದರೆ ಅದು ಶಾಶ್ವತ ಪರಿಹಾರವಲ್ಲ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಾ. ಜಿನದತ್ತ ದೇಸಾಯಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More Articles