ಪರಿಸರ ಉಳಿವಿಗೆ ಎಲ್ಲರೂ ಪ್ರತಿಜ್ಞೆ ಮಾಡಬೇಕು: ಸಿದ್ದನಗೌಡರ
- 15 Jan 2024 , 12:52 AM
- Belagavi
- 116
ಬೈಲಹೊಂಗಲ: ಕೊವಿಡ್ ಮಹಾಮಾರಿಯ ಅಟ್ಟಹಾಸದಲ್ಲಿ ಆಕ್ಸಿಜನ್ ಮಹತ್ವ ಅರಿತ ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಉತ್ತಮ ಆರೋಗ್ಯಕ್ಕಾಗಿ ಪರಿಸರ ಉಳಿಸಿ ಬೆಳೆಸುವ ಅನಿವಾರ್ಯತೆಗೆ ಬಂದಿದ್ದು ಇದನ್ನು ಅರಿತು ಪರಿಸರ ಉಳಿವಿಗೆ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಪರಿಸರ ದಿನದ ನಿಮಿತ್ಯ ಹೊಸೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿ, ಅರಣ್ಯ ನಾಶದಿಂದ ಸಸ್ಯ ಸಂಕುಲಗಳೆ ಅಳಿದು ಹೊಗುತ್ತಿವೆ. ಇದರಿಂದ ಉಸಿರಾಟಕ್ಕೆ ಉತ್ತಮ ಪ್ರಾಣವಾಯು ಸಿಗದೆ ನಮ್ಮ ಆರೋಗ್ಯವನ್ನು ನಾವೇ ಹಾಳುಮಾಡಿಕೊಳ್ಳುತ್ತಿದ್ದೆವೆ. ಇನ್ನಾದರು ಎಚ್ಚೆತ್ತುಕೊಂಡು ಸ್ವಾರ್ಥ ಸಾಧನೆಗೆ ಗಿಡ ಮರಗಳನ್ನು ಹಾಳುಮಾಡದೆ ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡುವುದರ ಮೂಲಕ ಪರಿಸರ ಕಾಳಜಿ ಮೆರೆಯೊಣ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮೋಹನ ವಕ್ಕುಂದ, ಮಂಡಲ ಯುವ ಮೊರ್ಚಾ ಉಪಾಧ್ಯಕ್ಷ ಗೌಡಪ್ಪ ಹೊಸಮನಿ ಬಿಜೆಪಿ ಕಾರ್ಯಕರ್ತರಾದ ಈರಣ್ಣಾ ಚಿಕ್ಕೊಪ್ಪ, ನಾಗರಾಜ ಬುಡಶಟ್ಟಿ, ಈಶ್ವರ ಗಾಣಿಗೇರ, ಕಿರಣ ಸಂಗಣ್ಣವರ, ನಾಗರಾಜ ಬೂದಿಹಾಳ, ಮಹೇಶ ಚಿಕ್ಕೊಪ್ಪ, ಅರ್ಜುನ ಪೇಂಟೆದ, ಮಲ್ಲಿಕಾರ್ಜುನ ಚಿಕ್ಕೊಪ್ಪ ಇತರರು ಸಸಿನೆಟ್ಟು ನೀರೆದರು.










