ಪರಿಸರ ಶುದ್ದ ಇದ್ದರೇ ಎಂಥ ರೋಗವನ್ನು ತಡೆಯಬಹುದು: ಹುಕ್ಕೇರಿ ಶ್ರೀ

ಬೆಳಗಾವಿ :ನಾಡಿನ ಪರಿಸರ ಶುದ್ದ ಇದ್ದರೇ ಎಂಥ ರೋಗವನ್ನು ತಡೆಗಟ್ಟಬಹುದು ಪ್ರತಿಯೊಬ್ಬರು ಮನೆಯ ಮುಂದೆ ಮರಗಳನ್ನು ನೆಟ್ಟು ಪರಿಸರ ಬೆಳೆಸಬೇಕೆಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

promotions

ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಗಿಡ ನೆಡವುದರ ಮೂಲಕ ವಿಶ್ವಪರಿಸರ ದಿನಾಚಾರಣೆ ಆಚರಿಸಿ ಮಾತನಾಡಿದರು. ಸಮಾಜದಲ್ಲಿ ಜನರು ಪರಿಸರವನ್ನು ರಕ್ಷಣೆ ಮಾಡುತ್ತಿಲ್ಲ. ಇದರಿಂದ ಹೊರಗಡೆ ಬರಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಆಮ್ಲ ಜನಕ ಸಿಗುತ್ತಿಲ್ಲ ಎಂದು ಸಾಕಷ್ಟು ಪರಿಶ್ರಮ ಪಡುತ್ತಿದ್ದೇವೆ. ಮರಗಳನ್ನು ಉಳಿಸಿ ಬೆಳೆಸುವಲ್ಲಿ ವಿಫಲವಾಗಿದ್ದೇವೆ. ಆಲ, ಬೇವು, ಪತ್ರಿ, ಆಲ, ಅರಳಿ ಸೇರಿದಂತೆ ಸಾಕಷ್ಟು ಮರಗಳನ್ನು ಬೆಳೆಸುತ್ತಿದ್ದೇವು. ಅದರಿಂದ ಸಾಕಷ್ಟು ಲಾಭಗಳು ಸಿಗುತ್ತಿತ್ತು.

promotions

ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿತರು ಆಕ್ಸಿಜನ್‌ಗಾಗಿ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟ ಉದಾರಣೆಗಳು ಸಾಕಷ್ಟಿದೆ. ಈಗಲೂ ನಾವು ಪರಿಸರ ಬೆಳೆಸದಿದ್ದರೇ ಅನಾಹುತ ಕಟ್ಟಿಟ್ಟ ಬುತ್ತಿ ಎಂದರು. ಅರಳಿಮರ ಒಂದು ದಿನಕ್ಕೆ 24 ಗಂಟೆ ಆಮ್ಲಜನಕ ಕೊಡುತ್ತದೆ. ಆಲದ ಮರ : ಒಂದು ದಿನಕ್ಕೆ 20 ಗಂಟೆಗಳ ಕಾಲ ಆಮ್ಲಜನಕವನ್ನು ಕೊಡುತ್ತದೆ. ಬೇವಿನ ಮರ 18 ಗಂಟೆ ಆಮ್ಲಜನಕವನ್ನೂ ಬಿಡುಗಡೆ ಮಾಡುತ್ತದೆ. ಪ್ರತಿಯೊಂದು ಮರಗಳನ್ನು ನಾವು ಬೆಳೆಸುವುದರಿಂದ ನಮಗೆ ಬಹಳ ಲಾಭವಿದೆ.

ಜನರು ಇನ್ನೂ ಸುಮ್ಮನೆ ಕುಳಿತುಕೊಂಡರೆ ಮುಂದಿನ ಪರಿಸ್ಥಿತಿಗೆ ನಾವೇ ಕಾರಣರಾಗುತ್ತವೆ. ಮನೆಯ ಮುಂದೆ ಒಂದೊoದು ಮರಗಳನು ಬೆಳೆಸಿ, ಪ್ರತಿಯೊಂದು ಮನೆಯ ಬೇಡಾದ ನೀರನ್ನು ಕೂಡ ಮರಗಳಿಗೆ ಹೊಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಮಾಡುತ್ತಿರುವುದರಿಂದ ನಮ್ಮನ್ನು ನಾವೇ ವಿಕೋಪಕ್ಕೆ ತಳ್ಳಿಕೊಳ್ಳುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.

Read More Articles