ಸಹಿ ಸಂಗ್ರಹ ವಿಷಯ ನನಗೆ ಗೊತ್ತಿಲ್ಲ: ಸಚಿವ ಪಾಟೀಲ
- 14 Jan 2024 , 10:33 PM
- Belagavi
- 119
ಬೆಳಗಾವಿ :ಶಾಸಕರು ಸಹಿ ಸಂಗ್ರಹ ಮಾಡುತ್ತಿರುವ ವಿಷಯ ನನಗೆ ತಿಳಿದಿಲ್ಲ. ನಾನು ಶಿವಮೊಗ್ಗದಲ್ಲಿದೆ. ಹಾದಿ ಬೀದಿಯಲ್ಲಿ ಮಾತನಾಡುವವರು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಅವರ ಆಹ್ವಾಲುಗಳನ್ನು ಹೇಳಬೇಕು. ಬೇಕಾದಲ್ಲಿ ಹೇಳಿಕೆ ನೀಡಿದರೆ ಮಕ್ಕಳ ಆಟವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಯಾವ ಮೂಲೆಯಲ್ಲಿಯಾದರೂ ಬೀಜ ಕೊರತೆ ಇದೆಯಾ ? ಬಿಜೆಪಿ ಸರಕಾರ ಟೀಕೆ ಮಾಡುವುದೇ ಕಾಂಗ್ರೆಸ್ ಆ ಜನ್ಮದ ಹಕ್ಕಾಗಿದೆ. ಮನಸಿಗೆ ತಕ್ಕ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು











