ಋತುಸ್ರಾವ ಮೈಲಿಗೆ ಎನ್ನುವದನ್ನು ಬಿಟ್ಟು ಶುಚಿತ್ವಕ್ಕೆ ಒತ್ತು ನೀಡಿ ಡಾ:ಪೂಜಾ

ಹುಕ್ಕೇರಿ: ಸಾಮಾನ್ಯವಾಗಿ ಇಂದಿಗೂ ಸಹ ಮುಟ್ಟು ಅಥವಾ ಋತುಸ್ರಾವ ಎಂದರೇ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಲ್ಲಿ ಅಸಹ್ಯ ಅಥವಾ ಮೈಲಿಗೆ ಎನ್ನುವ ಅಭಿಪ್ರಾಯವಿದೆ. ಇದನ್ನು ಹೊಗಲಾಡಿಸಿ ಜನರಲ್ಲಿ ಅರಿವು ಮೂಡಿಸಿ ಮಹಿಳೆಯರಿಗೆ ಶುಚಿತ್ವ ನಿರ್ವಹಣೆಗೆ ಅವಕಾಶ ಕಲ್ಪಿಸುವದು ಬಹಳ ಮುಖ್ಯ.

promotions

ಮುಜುಗರ ಬಿಟ್ಟು ಶುಚಿತ್ವಕ್ಕೆ ಒತ್ತು ನೀಡಿ ಎಂದು ನಗರ ಕುಟುಂಬ ಕಲ್ಯಾಣ ಕೇಂದ್ರದ ಮಹಿಳಾ ವೈಧ್ಯಾಧಿಕಾರಿ ಡಾ.ಪೂಜಾ ಕೆ ಅಭಿಪ್ರಾಯಪಟ್ಟರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ ಇಲಾಖೆ ಕರ್ನಾಟಕ ಸರಕಾರ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ “ನಮ್ಮೂರ ಬಾನೂಲಿ” ಸಮುದಾಯ ರೇಡಿಯೋ ಕೇಂದ್ರ ಜಂಟಿಯಾಗಿ ಗ್ರಾಮೀಣ ಭಾಗದ ಕಿಶೋರಿಯರು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ್ದ ಸ್ಯಾನಿಟರಿ ಪ್ಯಾಡ ನಿರ್ವಹಣೆ, ಮತ್ತು ಋತು ಚಕ್ರ ಸಮಸ್ಯೆಗೆ ವೈದ್ಯರ ಸಲಹೆಗಳಿಗಾಗಿ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

promotions

ಅನೇಕ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಗ್ರಾಮೀಣ ಭಾರತದಲ್ಲಿ ಮಾತ್ರ ಮಹಿಳೆಯರಿ ಇಂದಿಗೂ ಹೆಚ್ಚಿನ ಮಹಿಳೆಯರು ಋತುಚಕ್ರದ ವೇಳೆ ತುಂಬಾ ಹಿಂದಿನ ಕ್ರಮಗಳನ್ನೇ ಅನುಸರಿಸಿಕೊಂಡು ಹೋಗುತ್ತಲಿದ್ದಾರೆ, ಹೀಗಾಗಿ ಅನೇಕ ಜನನಾಂಗದ ಸೋಂಕುಗಳು ಅವರನ್ನು ಕಾಡುತ್ತಿವೆ. ಋತುಚಕ್ರದ ಬಗ್ಗೆ ಮಾತನಾಡಲು ಹಾಗೂ ಅದರ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಹಿಂಜರಿಯಬಾರದು ಸ್ವಚ್ಛತೆಯ ಬಗ್ಗೆ ಸರಿಯಾಗಿ ತಿಳಿಯದೇ ಇದ್ದಲ್ಲಿ ಬ್ಯಾಕ್ಟೇರಿಯಾಗಳು ಗರ್ಭಕೋಶಕ್ಕೆ ತಲುಪಿ ಮೂತ್ರನಾಳದ ಸೋಂಕು, ಕ್ಯಾನ್ಸರನಂತಹ ಅತೀದೊಡ್ಡ ಸಮಸ್ಯೆಗೆ ಕಾರಣ ಆಗಬಹುದೆಂದರು.

ಕಾರ್ಯಕ್ರಮದಲ್ಲಿ ನಗರ ಕುಟುಂಬ ಕಲ್ಯಾಣ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರಿಮತಿ. ಪ್ರೀಯಂಕಾ ಊಂಡಿ ಭಾಗವಹಿಸಿದ್ದರು. ಕುಮಾರಿ ರಾಧಿಕಾ ಬಡಿಗೇರ ನಿರೂಪಿಸಿದರು.

Read More Articles