ಲಾಕ್ ಡೌನ್ ನಲ್ಲಿ ಬಡವರ ಪಾಲಿಗೆ ಆಶಾಕಿರಣವಾದ ಬಿಜೆಪಿ ಯುವ ನಾಯಕ ಮಹಾಂತೇಶ ವಕ್ಕುಂದ
- 30 Dec 2023 , 11:58 AM
- Belagavi
- 145
ಬೆಳಗಾವಿ: ಒಂದಡೆ ಲಾಕ್ ಡೌನ ನಿಂದ ತತ್ತರಿಸಿ ಹೋದ ಬಡ ಜನರು.ಇನ್ನೊಂದಡೆ ಸರಿಯಾದ ಉದ್ಯೋಗ ಇಲ್ಲದೇ ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿ ತಲೆದೋರಿದ ಇಂತಹ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಮಹಾಂತೇಶ ವಕ್ಕುಂದ ತಮ್ಮ ಯುವಕರ ಪಡೆಯೊಂದಿಗೆ ಆಹಾರ ಪೊಟ್ಟಣ ಸೇರಿದಂತೆ ಅವಶ್ಯಕ ವಸ್ತುಗಳನ್ನು ಬಡವರಿಗೆ ಮತ್ತು ಹಸಿದ ಜೀವಗಳಿಗೆ ಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಬೆಳಗಾವಿ. ಚಿಕ್ಕೋಡಿ, ಅಥಣಿ, ಇಂಡಿ, ನದಿ ಇಂಗಳಗಾಂವ, ಹಾರುಗೇರಿ, ವಿಜಯಪುರಕ್ಕೆ ಬೆಳಗಾವಿಯಿಂದ ಆಹಾರ ಸಾಮಗ್ರಿಗಳನ್ನು ಮಹಾಂತೇಶ ಅವರು ಅವರ ಒನ್ ನೇಷನ್ ಯೂಥ್ ಸಂಸ್ಥೆ ಹಾಗೂ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಮತ್ತು ಫೌಂಡೇಶನ್ ವತಿಯಿಂದ ಕಳುಹಿಸಿ ಕೊಟ್ಟಿದ್ದಾರೆ. ಇನ್ನೂ ಬೆಳಗಾವಿಯ ಪೌರ ಕಾರ್ಮಿಕರಿಗೆ ಅಡುಗೆ ಸಿಬ್ಬಂದಿಗೆ, ಪ್ರಾಣದ ಹಂಗು ತೊರೆದು ರೋಗಿಗಳ ಸಾಗಣೆ ಹಾಗೂ ಶವ ಸಂಸ್ಕಾರದಲ್ಲಿ ತೊಡಗಿರುವ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಿಗೂ ಆಹಾರ ಕಿಟ್ ನೀಡಿದ್ದಾರೆ..











