ಹಿರಿಯ ಸಾಹಿತಿ, ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಗೀತಾ ನಾಗಭೂಷಣ್ ವಿಧಿವಿಶ
- 14 Jan 2024 , 9:34 PM
- Kalaburagi
- 108
ಕಲಬುರ್ಗಿ : ಹಿರಿಯ ಸಾಹಿತಿ ಗೀತಾ ನಾಗಭೂಷಣ(78) ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಸಂಜೆ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸದೆ ರಾತ್ರಿ 8:30 ಕ್ಕೆ ಅವರು ಸಾವನ್ನಪ್ಪಿದ್ದಾರೆ. ಎಂ.ಎ, ಬಿ.ಎಡ್, ಪದವೀಧರರಾದ ಇವರು ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯರಾಗಿ ಸುಮಾರು 30ವರ್ಷಗಳಕಾಲ ಸೇವೆ ಸಲ್ಲಿಸಿದ್ದಾರೆ.

ಇವರು 27ಕಾದಂಬರಿಗಳನ್ನು50ಸಣ್ಣಕಥೆಗಳು12ನಾಟಕಗಳನ್ನುರಚಿಸಿದ್ದಾರೆ. 2010ರಲ್ಲಿ ಗದಗದಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ನಾಡೋಜಪ್ರಶಸ್ತಿಪಡೆದಮೊದಲಮಹಿಳಾಸಾಹಿತಿಇವರಾಗಿದ್ದಾರೆ. ಕೇಂದ್ರಸಾಹಿತ್ಯಅಕಾಡೆಮಿಪ್ರಶಸ್ತಿ, ದಾನಚಿಂತಾಮಣಿಅತ್ತಿಮಬ್ಬೆಪ್ರಶಸ್ತಿ, ಕರ್ನಾಟಕಸಾಹಿತ್ಯಅಕಾಡೆಮಿಗೌರವಪ್ರಶಸ್ತಿ, ರಾಜ್ಯೋತ್ಸವಪ್ರಶಸ್ತಿಇವರಿಗೆಲಭಿಸಿವೆ.











