ಮತ್ತೇ ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಬೆಳವಣಿಗೆ

ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಮೇಶ ಜಾರಕಿಹೊಳಿ ಈಗ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಸದ್ದು ಕಡಿಮೆಯಾಗುತ್ತಿದ್ದಂತೆಯೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂಬೈಗೆ ತೆರಳಿ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

promotions

ಶೀಘ್ರದಲ್ಲಿಯೇ ಸಿಡಿ ಪ್ರಕರಣ ಅಂತ್ಯ ಕಾಣಲಿದ್ದು, ಪುನಃ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಮಾಜಿ ಸಚಿವ ರಮೇಶ ಜಾರಕಿಹೊಳಿ ಮುಂಬೈಗೆ ತೆರಳಿ ಬುಧವಾರದವೊಳಗೆ ಮತ್ತೆ ಸಂಪುಟಕ್ಕೆ ಒಳಗೆ ಸೇರಿಸಿಕೊಳ್ಳದಿದ್ದರೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಮಹಾರಾಷ್ಟ್ರದ ನಾಯಕರಿಂದ ಹೈಕಮಾಂಡ್‌ಗೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

promotions

ಮುಂಬೈನಲ್ಲಿ ಕುಳಿತು ಸಚಿವ ಸ್ಥಾನಕ್ಕಾಗಿ ದೇವೇಂದ್ರ ಫಡ್ನವಿಸ್ ಮೂಲಕ ಹೈಕಮಾಂಡ್‌ಗೆ ಒತ್ತಡ ಹಾಕುವ ತಂತ್ರಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ತಂತ್ರ ರೂಪಿಸುತ್ತಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ಬಿಜೆಪಿ ಕರೆ ತರುವಲ್ಲಿ ದೇವೇಂದ್ರ ಫಡ್ನವಿಸ್ ಪ್ರಮುಖ ಪಾತ್ರ ವಹಿಸಿದ್ದರು. ಬುಧವಾರದ ವರೆಗೆ ಡೆಡ್ ಲೈನ್ ನೀಡಿರುವ ಗೋಕಾಕ ಸಾಹುಕಾರ್ ರಮೇಶ ಜಾರಕಿಹೊಳಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ್ದಿದ್ದರೇ, ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನ ಸೇರಿದಂತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Read More Articles