ಲಾಕ ಡೌನ್ ವೇಳೆ ಸತತ 46 ದಿನಗಳ ವರೆಗೆ ಅನ್ನದಾನ ಮಾಡುವ ಮೂಲಕ ಯಶಸ್ವಿ ಕಾಯಕ ಮಾಡಿದ ಮಹಾಂತ ವಕ್ಕುಂದ ಫೌಂಡೇಶ
- 14 Jan 2024 , 11:35 PM
- Belagavi
- 156
ಬೆಳಗಾವಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ಹಸಿವಿನಿಂದ ಯಾರು ಸಹ ಪರದಾಡಬಾರದು ಎಂಬ ಕಾರಣಕ್ಕೆ ಬೆಳಗಾವಿಯ ಮಹಾಂತ ವಕ್ಕುಂದ ಫೌಂಡೇಶನ್ ಲಾಕ್ ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕದಲ್ಲಿ ನಿರತವಾಗಿತ್ತು. ಸತತ 46 ದಿನಗಳ ಕಾಲ ಆಹಾರ ನೀಡಿ ಹಸಿದ ಹೊಟ್ಟೆಗಳಿಗೆ ಆಶ್ರಯವಾಗಿತ್ತು ಮಹಾಂತ ವಕ್ಕುಂದ ಫೌಂಡೇಶನ್.

ಇಂದು ನಮ್ಮ ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ 46 ನೇಯ ದಿನದ ಅನ್ನದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ತಂಡ ನಾಳೆಯಿಂದ ಲಾಕ್ ಡೌನ ತೆರವಾಗುತ್ತಿರುವ ನಿಟ್ಟಿನಲ್ಲಿ ಅವೆ ಸೇವೆಯನ್ನು ಇಂದು ಕೊನೆಗೊಳಿಸುತ್ತಿದ್ದಾರೆ.

ಇನ್ನೂ ಇವರ ಈ ಸೇವಾ ಕಾರ್ಯದಿಂದ ಈ ವರೆಗೂ ಬೆಳಗಾವಿಯ ಜಿಲ್ಲಾ ಆಸ್ಪತ್ರೆ, ಕೆ ಎಲ್ ಈ ಆಸ್ಪತ್ರೆ ಸೇರಿದಂತೆ ಒಟ್ಟು 39100 ಊಟದ ಪೊಟ್ಟಣಗಳನ್ನು ವಿತರಿಸಲಾಗಿದೆ. ಈ ಅನ್ನದಾನ ಕಾರ್ಯಕ್ಕೆ ಕೈ ಜೋಡಿಸಿರುವ ನಮ್ಮ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳಿಗೆ ತಂಡ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದೆ.
ಲಾಕ್ಡೌನ ಆರಂಭದಲ್ಲಿ ಸುಮಾರು 2765 ಜನರಿಗೆ ಆಸ್ಪತ್ರೆಯ ಬೆಡ್ ವ್ಯವಸ್ಥೆ ಮಾಡುವ ಕಾರ್ಯವನ್ನು ನಿರ್ವಹಿಸಲಾಗಿದೆ. ಇದರೊಟ್ಟಿಗೆ 25 ಆಕ್ಸಿಜನ್ ಕಾನ್ಸಂಟ್ರೇಟರಗಳನ್ನು ಈ ವರೆಗೆ 600 ಕ್ಕೂ ಅಧಿಕ ಜನರಿಗೆ ನೀಡಿ ಅವರ ಜೀವ ಉಳಿಸುವ ಕಾರ್ಯ ಮಾಡಲಾಗಿದೆ. 25000 ದಷ್ಟು ಕನೇರಿ ಮಠದ ಹೋಮಿಯೋಪತಿಕ ಔಷಧೀಯ ದ್ರವ್ಯವನ್ನು ಇಡೀ ಜಿಲ್ಲೆಯಾದ್ಯಂತ ವಿತರಿಸಲಾಗಿದೆ.
ಮುಂಬರುವ ದಿನಗಳಲ್ಲಿ ಮನುಕುಲ ಮಹಾಮಾರಿಯಿಂದ ಮುಕ್ತವಾಗಲಿ ಎಂಬ ಸದಾಶಯವನ್ನು ಮಹಾಂತ ವಕ್ಕುಂದ ಫೌಂಡೇಶನ್ ಪ್ರಾರ್ಥನೆ ಸಲ್ಲಿಸಿದೆ.










