ನಿಪ್ಪಾಣಿಯಲ್ಲಿ ಭಾರತ್ ಪೆಟ್ರೋಲಿಯಂ ಬಂಕ್ ಅನ್ನು ಉದ್ಘಾಟಿಸಿದ ಸಚಿವೆ ಶಶಿಕಲಾ ಜೊಲ್ಲೆ
- 15 Jan 2024 , 1:46 AM
- Belagavi
- 112
ಬೆಳಗಾವಿ: ಇಂದು ನಿಪ್ಪಾಣಿಯ ಮಮದಾಪುರ ಗ್ರಾಮದಲ್ಲಿ, ನಮ್ಮ ಪಕ್ಷದ ಕಾರ್ಯಕರ್ತರಾದ ಶ್ರೀ ವಿವೇಕ ಬೂದಾಜಿರಾವ ಚವ್ಹಾಣ ಪಾಟೀಲ, ಅವರ ಮಾಲೀಕತ್ವದ ನೂತನ ಭಾರತ್ ಪೆಟ್ರೋಲಿಯಂ ಬಂಕ್ ಅನ್ನು ಉದ್ಘಾಟಿಸಿ, ಅವರ ಈ ನೂತನ ಉದ್ಯಮ ಯಶಸ್ವಿ ಪಥದಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸ್ವರೂಪ ಮಹಾಡಿಕ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ಉಪಾಧ್ಯಕ್ಷರಾದ ಶ್ರೀ ಎಂ.ಪಿ.ಪಾಟೀಲ, ಜಿ. ಪಂ. ಸದಸ್ಯರಾದ ಶ್ರೀ ಸಿದ್ದು ನರಾಟೆ, ದಾದಾಜಿರಾವ ನಿಂಬಾಳಕರ,(ಸರಕಾರ),ಶ್ರೀ ಜಯಾನಂದ ಜಾಧವ, ಶ್ರೀ ಅಪ್ಪಾಸಾಹೇಬ ಜೊಲ್ಲೆ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.











