ಅಸಮಾಧಾದನ ಬಗ್ಗೆ ಮಾತನಾಡಲ್ಲ: ಶಾಸಕ ರಮೇಶ

ಬೆಳಗಾವಿ ನನಗೆ ಅಸಮಾಧಾನಗಳು ಇದ್ದರೂ ಅದನ್ನು ಹೇಳಲು ಬರುವುದಿಲ್ಲ. ಕಾನೂನು ತೋಡಕು ಇದೆ ಕೆಲವೊಂದಿಷ್ಟು ದಿನ ಸಮಯ ಕೊಡಿ ಹೇಳ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

promotions

ಸುತ್ತೂರು ಮಠಕ್ಕೆ‌ ಹೋಗಿ ಮತ್ತೆ ಬೆಳಗಾವಿಗೆ ಆಗಮಿಸಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು. .ನಾನು ಮುಂಬೈಗೆ ಹೋಗಿ ನನ್ನ ಗಾಡ್ ಫಾದರ್ ಭೇಟಿಯಾಗಿದ್ದು ನಿಜ. ಆದರೆ ನಾನು ಸಚಿವನಾಗಲು ಮುಂಬೈಗೆ ಹೋಗಿದ್ದೇನೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅದು ಸುಳ್ಳು ಒಂದು ಸರಕಾರ ತೆಗೆದು ಸರಕಾರ ಸ್ಥಾಪನೆ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಮತ್ತೊಬ್ಬ ಮಂತ್ರಿ ಮಾಡಲು ಶಕ್ತಿ ಕೊಟ್ಟಿದ್ದಾನೆ. ನನಗೆ ಮಂತ್ರಿ ಮಾಡಿಸಿ ಎಂದು ಬೇರೊಬ್ಬರ ಮನೆಗೆ ಹೋಗುವ ಪರಿಸ್ಥಿತಿ ನನಗೆ ಬರುವುದಿಲ್ಲ ಎಂದರು.

promotions

Read More Articles