ಕೋವಿಡ್ ಕಡಿಮೆಯಾಗಿಲ್ಲ ಎಚ್ಚರಿಕೆಯಿಂದ ಇರಿ: ಸಂಸದೆ ಅಂಗಡಿ

ಬೆಳಗಾವಿ: ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಕೇಂದ್ರ ಸರಕಾರ ಉಚಿತವಾಗಿ ಎಲ್ಲರಿಗೂ ಲಸಿಕೆ ವಿತರಣೆ ಮಾಡುತ್ತಿದೆ. ಅದರಂತೆ ನಗರದಲ್ಲಿನ ಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್ ಲಸಿಕೆ ಕೊಡಿಸುವ ಜವಾಬ್ದಾರಿ ತೆಗೆದುಕೊಂಡು ಜನರ ಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಂಸದೆ ಮಂಗಳಾ ಅಂಗಡಿ ಹೇಳಿದರು.

promotions

ಅವರು ಗುರುವಾರ ನಗರದಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್ ವತಿಯಿಂದ ಕೊರೋನಾ ಲಸಿಕೆ‌ ವಿತರಣೆಯ ಕಾರ್ಯಕ್ರಮದಲ್ಲಿ‌ ಭಾಗಿಯಾಗಿ ಮಾತನಾಡಿದರು. ಇಡೀ ವಿಶ್ವವನ್ನೆ ತಲ್ಲಣಗೊಳಿಸಿರುವ ಕೊರೋ‌ನಾ ಸೋಂಕಿಗೆ ಭಾರತವೇ ನಲುಗುವಂತಾಗಿದೆ. ಇದರಿಂರ ರಕ್ಷಣೆ ಪಡೆಯಲು ದೇಶದ ಎಲ್ಲ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಉಚಿತವಾಗಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಇದನ್ನು ಎಲ್ಲರೂ ಹಾಕಿಸಿಕೊಂಡು ಕೊರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

promotions

ಪೃಥ್ವಿ ಸಿಂಗ್ ಫೌಂಡೇಶನ್ ನ ಅಧ್ಯಕ್ಷ ಪೃಥ್ವಿ ಸಿಂಗ್ ಮಾತನಾಡಿ, ಕೊರೋನಾ ಮಹಾಮಾರಿಯಿಂದ ಜನರು ಪಾರಾಗಾಲು ಒಂದೇ ಮಾರ್ಗವಿದೆ. ಸಾಮಾಜಿಕ‌ ಅಂತರ, ಸ್ಯಾನಿಟೈಸರ್, ಮಾಸ್ಕ್ ಹಾಗೂ ವ್ಯಾಕ್ಸಿನೇಷನ್‌ ಮಾಡಿಕೊಂಡು ಸದೃಢವಾಗಿರಬೇಕೆಂದರು ಹಾಗು ಡಾ.‌ಸೋನಾಲಿ ಸರ್ನೋಬತ್ ಹಲವಾರು ಹಾಜರಿದ್ದರು.

Read More Articles