ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದೆ ನಮ್ಮ ಅಜೆಂಡಾ : ಸತೀಶ ಜಾರಕಿಹೊಳಿ
- 17 Dec 2023 , 10:26 PM
- Belagavi
- 90
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶಜಾರಕಿಹೊಳಿ ಅವರಿಗೆ ಶನಿವಾರ ಸಂಗೊಳ್ಳಿರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪಟಾಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಸತೀಶ ಜಾರಕಿಹೊಳಿ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ಕಳೆದ ಮೂರುತಿಂಗಳಿನಿಂದಕೆಲಸಮಾಡುತ್ತಿದ್ದೇವೆ,ಕೋವಿಡ್ಪರಿಸ್ಥಿತಿಸೇರಿವಿವಿಧಸಂದರ್ಭಗಳಲ್ಲಿಸಾಕಷ್ಟುಕೆಲಸಮಾಡಿದ್ದೇವೆ. ಅಧಿಕೃತವಾಗಿ ಈ ಕಾರ್ಯಾಧ್ಯಕ್ಷರಾಗಿಅಧಿಕಾರಸ್ವೀಕರಿಸಿದ್ದೇವೆಎಂದುಹೇಳಿದರು.

ಕೆಳಹಂತದಿಂದ ಪಕ್ಷವನ್ನು ಕಟ್ಟಬೇಕಿದೆ. ಕಾಂಗ್ರೆಸ್ಪಕ್ಷವನ್ನುಪರಿವರ್ತಿಸುವುದೇಗುರಿ ಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಕೇಡಾರ್ಬೇಸ್ ಪಕ್ಷವಾಗಿ ಪರಿವರ್ತನೆ ಮಾಡುತ್ತಿದ್ದೇವೆ. ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವುದು ಹಾಗೂ ಕಾರ್ಯಕರ್ತರನ್ನು ಸೈದ್ದಾಂತಿಕ ತಳಹದಿಯಲ್ಲಿ ತರಬೇತಿಗೊಳಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಉತ್ತರಕರ್ನಾಟಕ ಅಷ್ಟೇ ಅಲ್ಲದೇ ಇಡೀರಾಜ್ಯದಲ್ಲಿಕಾಂಗ್ರೆಸ್ಪಕ್ಷವನ್ನುಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶಜಾರಕಿಹೊಳಿವಿಶ್ವಾಸವ್ಯಕ್ತಪಡಿಸಿದ್ದಾರೆ.











