ಸತೀಶ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಕಾರ್ಯಕರ್ತರು

ಗೋಕಾಕ : ಹುಕ್ಕೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದ ಬಿಜೆಪಿ ಹಿರಿಯ ಮುಖಂಡರು, ನೂರಾರು ಕಾರ್ಯಕರ್ತರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷ ಸೇರಿದರು.

promotions

ಪಟ್ಟಣದ ಹಿಲ್ ಗಾರ್ಡನ್ ನಲ್ಲಿ ಕಚೇರಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೂವಿನ ಹಾರ ಹಾಕುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು, 2023ರ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

promotions

ಬಿಜೆಪಿ ಹಿರಿಯ ಮುಖಂಡರಾದ ಶೇಖರ ಮುಗಳಿ, ಢಳ್ಯಾಪ್ಪ ಜಕ್ಕಪ್ಪಗೋಳ, ಶಾಮಗೌಡಾ ಪಾಟೀಲ, ಕಿರಣಸಿಂಗ್ ರಜಪೂತ, ಕಾರ್ಯಕರ್ತರಾದ ರಾಹುಲ್ ಬಡಕುಂದ್ರಿ, ಯಾಸಿನ್ ಮುಲ್ಲಾ, ಮಲ್ಲಪ್ಪಾ ಬಡಕುಂದ್ರಿ, ಲಕ್ಕಮ್ಮಗೌಡಾ ಪಾಟೀಲ, ಗಣೇಶ್ ಕೆಂಚಗಾರಟ್ಟಿ, ಗಜು ಚೌಗಲಾ, ಮಲ್ಲಪ್ಪ ಚೌಗಲಾ, ರವಿ ಪಾಟೀಲ, ರಾಜು ಚೌಗಲಾ, ಬಸವಂತ ಬಡಕುಂದ್ರಿ, ಸಂಜು ರೇವಣ್ಣವರ, ಶಿವಾನಂದ ಗುಂಡಿ ಸೇರಿದಂತೆ ನೂರಾರು ಜನರು ಕಾಂಗ್ರೆಸ್ ಸೇರ್ಪಡೆಯಾದರು.

Read More Articles