ಸುಳ್ಳಿಗೆ ಸುಖವಿಲ್ಲ, ಸತ್ಯಕ್ಕೆ ಸಾವಿಲ್ಲ: ದಾನೇಶ್ವರ ಪೂಜ್ಯರು ಬಂಡಿಗಣಿ

ಧರ್ಮದ ಹಣ ಧರ್ಮಕ್ಕೆ ಸಹಾಯವಾಗಬೇಕು ಕರ್ಮಕ್ಕೆ ಅಲ್ಲ ಹಿಂದೂ-ಮುಸ್ಲಿಮರಲ್ಲಿ ಭೇದ ಭಾವ ಮಾಡದೆ ಒಂದೇ ಎಂದು ತಿಳಿದು ನಡೆಯಬೇಕು ಎಂದು ಚಕ್ರವರ್ತಿ ದಾನೇಶ್ವರ ಪೂಜ್ಯರು ಹೇಳಿದರು. ಅವರು ಬಂಡಿಗಣಿ ಶ್ರೀ ಬಸವ ಗೋಪಾಲ ಮಠದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿ ದಾರಿ ತಪ್ಪಿ ನಡೆಯುವಾಗ ತಿದ್ದಿ ಬುದ್ದಿ ಸತ್ಯದಿಂದ ಹೇಳುವರ ಮಾತನ್ನು ಕೇಳಬೇಕು.

promotions

ಈಗಿನ ಕಾಲೇಜಿನ ಯುವ ಜನಾಂಗದವರು ಮಜಾ ಮೋಜು ಮಾಡಿ ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿರಿ, ಬೇರೆಯವರ ಹೆಣ್ಮಕ್ಕಳನ್ನು ವಕ್ರದೃಷ್ಟಿಯಿಂದ ನೋಡದೆ ಸಹೋದರಿ ಭಾವನೆಯಿಂದ ನೋಡಬೇಕು ಹೆಣ್ಣು-ಗಂಡು ಸತ್ಯ ಧರ್ಮ ನೀತಿ ಮಾರ್ಗವನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಸಾಗಿದರೆ ಒಳ್ಳೆಯದು. ಯವ್ವನ ಆಸ್ತಿ ಅಂತಸ್ತು, ಸೌಂದರ್ಯ, ಅಧಿಕಾರ ಯಾವದು ಸ್ಥಿರವಲ್ಲ ಇದ್ದಾಗ ದಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಿ, ಉಗ್ರಗಾಮಿಗಳು ದೇಶದ ಮೇಲೆ ಅನ್ಯಾಯ ಮಾಡಲು ಬಂದಾಗ ಸೈನಿಕರಾಗಿ ದೇಶ ಕಾಯಲು ಹಾಗೂ ಸತ್ಪೂರುಷರ ಮೇಲೆ ಅನ್ಯಾಯ ನಡೆದರೆ ಸತ್ಯಕ್ಕಾಗಿ ಸದಾ ಸಿದ್ದರಾಗಬೇಕು.

promotions

ಸಭೆಯಲ್ಲಿ ಸಾರಾಯಿ ಕುಡಿಯುವರನ್ನು ಎಬ್ಬಿಸಿ ಮುಂದೆ ಕುಡಿಯದಂತೆ ಹೇಳಿದಾಗ, ವ್ಯಸನಾದಿಗಳು ತಾವೇ ಬಂದು ಇನ್ಮುಂದೆ ಸಾರಾಯಿ ಕುಡಿಯುವದಿಲ್ಲ ಎಂದರು, ಸಾರಾಯಿ ಕೂಡಿದು ಎಷ್ಟೋ ಕುಟುಂಬಗಳು ಬೀದಿಪಾಲಾಗಿ ಜಿವನವನ್ನೇ ಹಾಳು ಮಾಡಿಕೊಂಡಿದ್ದಾರೆ, ಅದಕ್ಕಾಗಿ ಎಲ್ಲರೂ ವ್ಯಸನ ಮುಕ್ತರಾದರೆ ಕುಟುಂಬವೇ ಸುಖ ಜೀವನ ನಡೆಸಲು ಸಾಧ್ಯವಾಗುವದು.

ಇದೆ ಸಂದರ್ಭದಲ್ಲಿ ವಿಜಯ ವೇದಾಂಗ ಶ್ರೀಗಳು. ನಿಂಗಪ್ಪಗೌಡ ನಾಡಗೌಡ, ವಿಜಯವಾಣಿ ವರದಿಗಾರ ಚಿದಾನಂದ ಪಾಟೀಲ ನಬಿಸಾಬ ಮುಲ್ಲಾ. ಕರೆಪ್ಪ ದಡ್ಡಿಮನಿ. ಚನ್ನಪ್ಪ ನಿಂಬರಗಿ. ಮಾರುತಿ ದೊಡಮನಿ. ಡಾ ಭರತ ಲೋನಾರೆ ಸೇರಿದಂತೆ ಭಕ್ತರಿದ್ದರು.

Read More Articles