ಬೆಳಗಾವಿ: 2012 ರಿಂದ ರಾಣಿ ಚೆನ್ನಮ್ಮ ವಿವಿ ಯ ಯ MBA ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ವಿಷ್ಣುಕಾಂತ ಚಟಪಲ್ಲಿ ಅವರನ್ನು ರಾಜ್ಯದ ಪ್ರತಿಷ್ಠಿತ ಗದಗದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿ ಗಳನ್ನಾಗಿ ನೇಮಕಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ.ವಿಷ್ಣುಕಾಂತ ಚಟಪಲ್ಲಿ ವಿಶೇಷ ಅಧಿಕಾರಿಗಳಾಗಿ, ರಿಜಿಸ್ಟಾರ ಆಗಿ ಸೇವೆ, IQAC ನಿರ್ದೇಶಕ ರಾಗಿ ಸಲ್ಲಿಸಿದ್ದಾರೆ.