ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ ಸಾರಿಗೆ ನಿಗಮ

ಬೆಳಗಾವಿ: ಜಿಲ್ಲೆಯ ಹಲವು ಬಸ್‌ಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಜನರು ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ಕೊರೋನಾ ಹರಡುವಿಕೆಗೆ ಕೆ.ಎಸ್.ಆರ್.ಟಿ.ಸಿ ಇಲಾಖೆಯೆ ಅನುಕೂಲ ಮಾಡಿಕೊಟ್ಟಂತಾಗಿದೆ. ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲಿಯೇ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಒಬ್ಬರ ಪಕ್ಕ ಒಬ್ಬರು ಕುಳಿತು ಅಷ್ಟೇ ಅಲ್ಲದೆ ಕಿಕ್ಕಿರಿದು ತುಂಬಿ ಪ್ರಯಾಣ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

promotions

ಲಾಕ್ ಡೌನ್ ಸಡಿಲಿಕೆ ನಂತರ ಸಾರಿಗೆ ಇಲಾಖೆ ಪ್ರಯಾಣಿಕರಿಗೆ ಮಾಸ್ಕ್‌ ಕಡ್ಡಾಯವಾಗಿ ಹಾಕಬೇಕು. ಮೂವರು ಕೂರುವ ಸೀಟಿನಲ್ಲಿ ಇಬ್ಬರು, ಇಬ್ಬರು ಕೂರುವ ಸೀಟಿನಲ್ಲಿ ಒಬ್ಬರೆ ಕುಳಿತು ಪ್ರಯಾಣಿಸಬೇಕು ಎಂದು ಹೇಳಿತ್ತು ಆದರೆ ಈಗ ಅವೆಲ್ಲ ನಿಯಮಗಳನ್ನು ಗಾಳಿಗೆ ತೂರಿದೆ ಇದರಿಂದ ಕುಂದಾನಗರಿಯಲ್ಲಿ ಕೋರೊನಾ ಹರಡುವ ಭೀತಿ ಶುರುವಾಗಿದ್ದು. ಬಸನಲ್ಲಿ ಪ್ರಯಾಣಿಸುವ ಯಾರೊಬ್ಬರಿಗೂ ಕೊರೋನಾ ಇದ್ದರೆ ಅದು ಎಲ್ಲ ಪ್ರಯಾಣಿಕರಿಗೂ ಹರಡುವುದು ಖಚಿತ. ಒಂದು ವೇಳೆ ಟಿಕೆಟ್ ನೀಡುವ ನಿರ್ವಾಹಕನಿಗೆ ಸೋಂಕು ತಗುಲಿದರೆ ಟಿಕೆಟ್‌ ನೀಡುವ ಸಂದರ್ಭದಲ್ಲಿ ಎಲ್ಲರಿಗೂ ಕೊರೋನಾ ವೈರಸ್‌ ಹರಡುತ್ತದೆ. ಪ್ರಯಾಣಿಕರು ಮನೆಗೆ ಹೋಗುವ ಮುನ್ನ ತಮ್ಮ ಗೆಳೆಯರು, ಮನೆ ಮಂದಿಗೆಲ್ಲ ಕೊರೋನಾ ಹರಡಿಸಿ ಬಿಡುವ ಸಾಧ್ಯತೆ ಇದೆ.

promotions

Read More Articles