ಕರುನಾಡಿಗೆ ಯಡಿಯೂರಪ್ಪನವರೆ ಬಾಸ್
- 14 Jan 2024 , 11:08 PM
- Bengaluru
- 129
ಬೆಂಗಳೂರು: ದಕ್ಷಿಣ ಭಾರತದಲ್ಲಿ ಬೇರು ಮಟ್ಟದಲ್ಲಿ ಬಿಜೆಪಿಯ ಕಮಲವನ್ನು ಅರುಳಿಸಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ತರುವಲ್ಲಿ ಹೋರಾಟ ನಡೆಸಿವುದರ ಮೂಲಕ ಕರುನಾಡಲ್ಲಿ ನಾಲ್ಕು ಬಾರಿ ಸಿಎಂ ಸ್ಥಾನ ಅಲಂಕರಿಸಿರುವ ಯಡಿಯೂರಪ್ಪನವರೇ ಮುಂದಿನ ಅವಧಿಯವರಿಗೂ ಸಿಎಂ ಆಗಲಿದ್ದಾರೆ.

ಇಳಿ ವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಕೆಲಸ ಮಾಡುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಈಗ ಕೆಳೆಗೆ ಇಳಿಸಿದರೆ ಬರುವ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿ ನೆಲ ಸಮವಾಗುವಂತೂ ಖಚಿತ ಎಂದು ಅರೆತಿರುವ ಹೈಕಮಾಂಡ್ ಯಡಿಯೂರಪ್ಪ ಬದಲಾವಣೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಲು ಹೋಗುವುದಿಲ್ಲ.

ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರುವೆ ಎಂದು ಹೇಳುತ್ತಿರುವ ಸಿಎಂ ಯಡಿಯೂರಪ್ಪ ಹೈಕಮಾಂಡ್ ಸಂದೇಶ ಯಾರು ಯಾರಿಗೆ ಕೇಳುತ್ತಿದ್ದಾರೆ ಎನ್ನುವುದು ಹಲವು ಅನುಮಾನ ಹುಟ್ಟು ಹಾಕಿದೆ.
ಯಡಿಯೂರಪ್ಪ ಸಿಎಂ ಆದಗಲೆಲ್ಲ. ಅಪಸ್ವರ ಕೇಳಿ ಬರುವುದು ಕಾಮನ್. ಹಾಗೆ ಯಡಿಯೂರಪ್ಪನವರನ್ನು ಪ್ರಮುಖ ಹುದ್ದೆಯಿಂದ ಕೆಳೆಗೆ ಇಳಿಸಿದರೆ ಬಿಜೆಪಿಗೆ ನಷ್ಟ ಎಂದು ಅರಿತಿರುವ ಹೈಕಮಾಂಡ್ ಯಡಿಯೂರಪ್ಪ ಬದಲಾವಣೆ ಮಾಡಲು ಹಿಂದೆ ಮುಂದೆ ನೋಡುತ್ತಿದೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಇದರಲ್ಲಿ ಯಾವುದೇ ಸಂದೇಹ ಇಲ್ಲ. ಯಡಿಯೂರಪ್ಪ ಬದಲಾವಣೆ ಕೂಗಿಗೆ ಪುಷ್ಟಿ ಬರುತ್ತಿದ್ದಂತೆ ನಾಡಿನ ಎಲ್ಲ ಮಠಾಧೀಪತಿಗಳು ಸಿಎಂ ಯಡಿಯೂರಪ್ಪಗೆ ಚಕ್ರವ್ಯೂಹ ರಚಿಸಿದ್ದಾರೆ.
ಒಂದು ವೇಳೆ ಮಠಾಧೀಪತಿಗಳ ಚಕ್ರವ್ಯೂಹ ದಾಟಿ ಸಿಎಂ ಬದಲಾವಣೆ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತೇ 70 ವರ್ಷ ಆದರೂ ಆಗಬಹುದು. ರಾಜ್ಯದ ಎಲ್ಲ ಬೆಳವಣಿಗೆ ಗಮನಿಸುತ್ತಿರುವ ಹೈಕಮಾಂಡ್ ಯಡಿಯೂರಪ್ಪನವರಿಗೆ ಯಾವ ಸಂದೇಶ ಕೊಡಲಿದೆ ಎಂದು ಕೆಲವೆ ಗಂಟೆಯಲ್ಲಿ ತಿಳಿಯಲಿದೆ.










